ಕಾರವಾರ:
ಬಲಿಷ್ಟ ಭಾರತ ನಿರ್ಮಾಣ ತಾಯಿಯರ ಕೈಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.
ತಾಲೂಕಿನ ಬಾವಳದಲ್ಲಿ ಮಾತ್ರಪೂರ್ಣ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರ ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಯನ್ನು ಬಳಸಿಕೊಂಡು ಮಾತೆಯರು ಮಕ್ಕಳನ್ನು ಪೋಷಿಸಬೇಕು. ಗರ್ಭಿಣಿ ಹಾಗೂ ಬಾಣಂತಿಯರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಅವರು ಹೇಳಿದರು. ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ನೀಡಲು ಆರೋಗ್ಯವಂತ ತಾಯಿಯರ ಅವಷ್ಯಕತೆಯಿದೆ. ಹುಟ್ಟಿದ ಪ್ರತಿ ಮಗು ಕೂಡ ದೇಶದ ಆಸ್ತಿಯಾಗಿದ್ದು, ಮಕ್ಕಳಿಗೆ ಸರಿಯಾದ ಪೋಷಣೆ ದೊರೆಯಬೇಕು. ಈ ನಿಟ್ಟಿನಲ್ಲಿ ಮೂರು ತಿಂಗಳ ಗರ್ಬಿಣಿಯರಿಂದ ಹೆರಿಗೆ ಆದ ಆರು ತಿಂಗಳ ವರೆಗೆ ಹಾಲು, ಮೊಟ್ಟೆ, ತರಕಾರಿಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ಪ್ರತಿ ಅಂಗನವಾಡಿಗಳಿಂದ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದ್ದು, ಸದುಪಯೋಗ ಪಡೆಯುವಂತೆ ಕರೆ ನೀಡಿದರು. ವಿದ್ಯೆ ಇಲ್ಲದಿದ್ದರೆ ಸಮಾಜದಲ್ಲಿ ಗೌರವ ಸಿಗುವದಿಲ್ಲ. ಹೀಗಾಗಿ ಯಾವ ಮಕ್ಕಳನ್ನು ವಿದ್ಯೆಯಿಂದ ದೂರ ಮಾಡಬೇಡಿ ಎಂದು ಸಚಿವರು ಮನವಿ ಮಾಡಿದರು.
Leave a Comment