ಕಾರವಾರ: ಕೊಡುಗು ಜಿಲ್ಲೆಯ ಸೋಮವಾರಪೇಟೆಯ ಕುಡಿಗೆಯಲ್ಲಿರುವ ಸೈನಿಕ ವಸತಿ ಶಾಲೆಗೆ 2018-19 ನೇ ಸಾಲಿಗಾಗಿ 6ನೇ ಮತ್ತು 9ನೇ ತರಗತಿ ಪ್ರವೇಶಕ್ಕಾಗಿ ಅರ್ಹತಾ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜನೆವರಿ 7, 2018 ಭಾನುವಾರದಂದು ಪರೀಕ್ಷೆಗಳು ನಡೆಯಲಿವೆ. (6ನೇ ತರಗತಿಯಲ್ಲಿ ಪಾಲ್ಗೊಳ್ಳುವವÀರು ದಿನಾಂಕ 02/07/2007 ರಿಂದ 01/07/2008 ರೊಳಗೆ ಹಾಗೂ 9ನೇ ತರಗತಿಗಾಗಿ 02/07/2004ರಿಂದ 01/07/2005ರೊಳಗೆ ಅಭ್ಯರ್ಥಿಯು ಜನಿಸಿರಬೇಕು.) ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ 5 ಮತ್ತು 8ನೇ ತರಗತಿಯಲ್ಲಿ ಓದುತ್ತಿರಬೇಕು
ಅರ್ಜಿ ಸಲ್ಲಿಸಲು ಅಂತರ್ಜಾಲ ಮುಖಾಂತಾರ www.sainikschoolkodagu.edu.in ನ್ನು ಸಂಪರ್ಕಿಸಬಹುದು ಅಥವಾ ಖುದ್ದಾಗಿ ಶಾಲೆಯಿಂದ ಮಾಹಿತಿಯನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08276-278963 ನ್ನು ಸಂಪರ್ಕಿಸಲು ಉಪ ನಿರ್ದೆಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರವಾರ ಇವರು ತಿಳಿಸಿರುತ್ತಾರೆ.
Leave a Comment