ಕಾರವಾರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರೀಯಾಶೀಲ ಸಂಘ ಸಂಸ್ಥೆಗಳಿಂದ ಸ್ವಾಧಾರಗೃಹ ತೆರೆಯಲು ಅರ್ಜಿ ಆಹ್ವಾನಿಸಿದೆ.
ಇಚ್ಛೆಯುಳ್ಳ ಸಂಸ್ಥೆಯವರು ತಮ್ಮ ಸಂಸ್ಥೆಯ ಬೈಲಾಕಾಪಿ, ನೊಂದಣಿ ಪತ್ರ, 3 ವರ್ಷದ ಆಡಿಟ್ವರದಿ, ಆಡಳಿತ ವರದಿ, ವಾರ್ಷಿಕ ವರದಿ, ಪ್ರಗತಿ ವರದಿ, ನೊಂದಣಿ ನವೀಕರಣ ಪ್ರಮಾಣ ಪತ್ರ, ಕಮೀಟಿ ಸದಸ್ಯರ ವಿವರ, ಬಾಡಿಗೆ ಕರಾರು ಪತ್ರ, ಕಟ್ಟಡದ ಛಾಯಾಚಿತ್ರ ಹಾಗೂ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ನಿರ್ವಹಿಸಿದ ಕುರಿತು ದಾಖಲಾತಿಗಳ ಪ್ರಸ್ತಾವನೆಯನ್ನು ಅಕ್ಟೋಬರ 21 ರೊಳಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರದಲ್ಲಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಯೋಜನೆ ಮಾರ್ಗಸೂಚಿಯಂತೆ (ಭಾರತ ಸರ್ಕಾರದ ವೆಬ್ಸೈಟ್ನಿಂದ ಮಾರ್ಗಸೂಚಿಯನ್ನು ಪಡೆಯಬಹುದಾಗಿದೆ. Website Adress – ministry of women and child development scheme-swadhargreh 2015) ಹಾಗೂ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ ಹಾಗೂ ಆಯಾ ತಾಲೂಕಿನ ಶಿಶು ಅಭಿವ್ರದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ
Leave a Comment