ಹೊನ್ನಾವರ : ಅಂಕೋಲಾದ ಶೆಟಗೇರಿಯಲ್ಲಿ ನಡೆದ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಮಾ.ಹಿ.ಪ್ರಾ. ಗುಣವಂತೆ ಶಾಲೆಯ ವಿದ್ಯಾರ್ಥಿಗಳು ಹೆಣ್ಣುಮಕ್ಕಳ ಕಬಡ್ಡಿ ಪಂದ್ಯಾಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ನಾಲ್ಕನೇ ಬಾರಿಗೆ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ತೇಜಸ್ವಿನಿ ಗೌಡ (ನಾಯಕಿ) ಸಂಜನಾ ಗೌಡ, ಮಹಾಲಕ್ಷ್ಮಿ ಗೌಡ, ಕವನಾಗೌಡ, ಕವಿತಾ ಗೌಡ,ನಮನಾ ಗೌಡ, ಚಂದನಾ ಪಟಗಾರ, ನಂದಿತಾ ಗೌಡ, ಚೈತ್ರಾ ಗೌಡ, ಅನುಷಾ ಗೌಡ, ಸಿಂಚನಾ ಗೌಡ, ಪ್ರಿಯಾಂಕಾ ಗೌಡ, ಶ್ರಾವ್ಯಾ ಭಂಡಾರಿ ಇವರಿಗೆ ತರಭೇತಿ ನೀಡಿದ ರಾಮಚಂದ್ರ ನಾಯಕ ಹಾಗೂ ಶಾಲೆಗೂ ಮತ್ತು ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯಗುರುಗಳು ಸಹಶಿಕ್ಷಕರು, ಎಸ್.ಡಿ.ಎಮ್.ಸಿಯವರು, ಊರನಾಗರಿಕರೂ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಎಲ್ಲ ಅಧಿಕಾರಿವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Leave a Comment