ಹಳಿಯಾಳ:-
ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಬೇಕಾದರೆ ಮಕ್ಕಳನ್ನು ವಿವಿಧ ಸ್ಪರ್ದಾತ್ಮಕ ಸಂಸ್ಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಅದರಲ್ಲೂ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಲು ಪೂರಕವಾಗಿದೆ ಎಂದು ಹಳಿಯಾಳ ಭಾರತ್ ಸ್ಕೌಟ್ ಮತ್ತು ಗೈಡ್ಸ್ ತಾಲೂಕ ಘಟಕದ ಪರೀಕ್ಷಾ ವಿಕ್ಷಕಿ ರಾಧಾರಾಣಿ ಅಭಿಪ್ರಾಯಪಟ್ಟರು.
ತಾಲೂಕಿನ ಭಾಗವತಿ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಹಳಿಯಾಳ ತಾಲೂಕಿನ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ “ಪಟಾಲಂ ನಾಯಕರ” ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ಶಿರಸಿ ಶೈಕ್ಷಣಿಕ ಜಿಲ್ಲೆಯ ಭಾರತ್ ಸ್ಕೌಟ್ಸ್ನ ಜಿಲ್ಲಾ ಆಯುಕ್ತ ವಿ.ಎಚ್.ಭಟ್ಕಳ ಶಿಬಿರವನ್ನು ಉದ್ಘಾಟಿಸಿ ಇಂದಿನ ಮಕ್ಕಳು ಸ್ಪರ್ದಾತ್ಮಕ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡುವಲ್ಲಿ ದಾಪುಗಾಲು ಹಾಕಬೇಕೆಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹಮ್ಮದ ಮುಲ್ಲಾ ಮಾತನಾಡಿ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು ಮತ್ತು ಚಾರಿತ್ರ್ಯ ನಿರ್ಮಾಣ ಮಾಡುತ್ತದೆ ಎಂದರು.
ಸ್ಕೌಟ್ಗೈಡ್ಸ್ ಆಯುಕ್ತ ಆರ್.ವೈ.ಘಟಕಾಂಬಳೆ, ಉಪಾಧ್ಯಕ್ಷೆ ಸುರೇಖಾ ನಾಯ್ಕ, ಪ್ರೌಢ ಶಾಲಾ ದೈ.ಶಿ. ಸಂಘದ ಅಧ್ಯಕ್ಷ ವಿವೇಕ ಕವರಿ, ತಾಲೂಕಾ ದೈಹಿಕ ಶಿಕ್ಷಣ ಪರೀವಿಕ್ಷಕ ಸಲೀಂ ಜಮಾದಾರ, ಜಿಲ್ಲಾ ತರಬೇತಿದಾರ ಚಂದ್ರಶೇಖರ ಸಿ.ಎಸ್., ಸಂಘಟಕ ವಿರೇಶ ಮಾದರ, ಜಿಲ್ಲಾ ಸಹಾಯಕಿ ಲಿನೇಟ್ ಶೆರಾವೊ, ತಾಲೂಕಾ ಭಾ.ಸ್ಕೌ.ಗೈ. ಕಾರ್ಯದರ್ಶಿ ರಮೇಶ ಕುರಿಯವರ, ಜಿಲ್ಲಾ ಪ್ರತಿನಿಧಿ ನವೀನ ಕುಮಾರ, ಶಿಕ್ಷಣ ಸಂಯೋಜಕ ಡಿ.ಎಮ್.ನಾಡಗೌಡ, ಎಸ್.ವಿ.ಬಿರಾದಾರ, ಮುಖ್ಯೋಪಾಧ್ಯಾಯ ನಾಗರಾಜ ನಾಯ್ಕ ಇದ್ದರು.
ಶಿಕ್ಷಕ ಮಂಜುನಾಥ ಎನ್ ಆರ್. ಕಾರ್ಯಕ್ರಮ ನಿರೂಪಿಸಿದರು, ಆರ್.ವೈ.ಘಟಕಾಂಬಳೆ ಸ್ವಾಗತಿಸಿದರು, ಶಿಕ್ಷಕ ಸ್ಕೌಟ್ ಮಾಸ್ಟರ್ ಪ್ರವೀಣ ಫಾಯಿದೆ ವಂದಿಸಿದರು.
Leave a Comment