ಕಾರವಾರ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಅಕ್ಟೋಬರ 23 ರಿಂದ 27 ರವರೆಗೆ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು.
ಅಕ್ಟೋಬರ 23 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ರವರೆಗೆ ಜೋಯಿಡಾ ಮತ್ತು ಶಿರಸಿ ಪ್ರವಾಸಿ ಮಂದಿರ, ಅಕ್ಟೋಬರ 24 ರಂದು ಬೆಳಗ್ಗೆ 11. ಗಂಟೆಯಿಂದ ಮದ್ಯಾಹ್ನ 12.30 ರವರೆಗೆ ಅಂಕೋಲಾ ಮತ್ತು ಕುಮಟಾ ಹಾಗೂ 11.30 ಗಂಟೆಯಿಂದ ಮದ್ಯಾಹ್ನ 1 ರವರೆಗೆ ಮುಂಡಗೋಡ ಪ್ರವಾಸಿ ಮಂದಿರಗಳಲ್ಲಿ, ಅಕ್ಟೋಬರ 25 ರಂದು ಬೆಳಗ್ಗೆ 11.30 ಗಂಟೆಯಿಂದ ಮದ್ಯಾಹ್ನ 1 ರವರೆಗೆ ಕಾರವಾರ ಪೊಲೀಸ್ ಅಧಿಕ್ಷಕರ ಕಚೇರಿಯಲ್ಲಿ ಹಾಗೂ ಅಕ್ಟೋಬರ 26 ರಂದು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ರವರೆಗೆ ಭಟ್ಕಳ ಮತ್ತು ಸಿದ್ದಾಪುರ ಪ್ರವಾಸಿ ಮಂದಿರ, ಅಕ್ಟೋಬರ 27 ರಂದು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ರವರೆಗೆ ಹಳಿಯಾಳ, ಯಲ್ಲಾಪುರ ಮತ್ತು ಹೊನ್ನಾವರ ಪ್ರವಾಸಿ ಮಂದಿರಗಳಲ್ಲಿ ಅಹವಾಲುಗಳನ್ನು ಸ್ವೀಕರಿಸಲಾಗುವದು.. ದೂರು ನೀಡುವವರು ಸಿವಿಲ್ ಮತ್ತು ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಹೊರತುಪಡಿಸಿ ಇನ್ನುಳಿದ ದೂರುಗಳನ್ನು ಈ ಸಂದರ್ಭದಲ್ಲಿ ನೀಡಬಹುದು. ಅರ್ಜಿದಾರರು ಅರ್ಜಿಯಲ್ಲಿ ತಮ್ಮ ಹೆಸರು ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ತಪ್ಪದೇ ನಮೂದಿಸತಕ್ಕದ್ದು. ಮಾಹಿತಿಗಾಗಿ 08382-222202, 222250, 222022,220198 ಸಂಪರ್ಕಿಸಲು ಕಾರವಾರ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಕೋರಿದ್ದಾರೆ.
Leave a Comment