ಕಾರವಾರ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಖಾಲಿ ಇರುವ ಪದವಿಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ತರಗತಿಗಳ) ವೃಂದದ ಹುದ್ದೆಗಳ ನೇರ ನೇಮಕಾತಿಯಿಂದ ಭರ್ತಿ ಮಾಡಲು ನಿಗದಿಪಡಿಸಲಾಗಿರುವ ಜಿಲ್ಲಾ ಮಟ್ಟದ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ. ನವ್ಹಂಬರ 11 ಮತ್ತು 12 ರಂದು ಪರೀಕ್ಷೆ 1, ನ.18 ಮತ್ತು 19 ರಂದು ಪರೀಕ್ಷೆ 2, ನ.25 ಮತ್ತು 26 ರಂದು ಪರೀಕ್ಷೆ-3 ಹಾಗೂ ಡಿಸೆಂಬರ 9 ಮತ್ತು 10 ರಂದು ಪರೀಕ್ಷೆ-4 ನಡೆಸಲಾಗುವದು. ಹೆಚ್ಚಿನ ಮಾಹಿತಿಯನ್ನು ಇಲಾಖಾ ವೆಬ್ಸೈಟ್ www.schooleducation.kar.nic.in ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಡಿ.ಡಿ.ಪಿ.ಐ ಪ್ರಕಾಶ ಪಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Leave a Comment