ಕಾರವಾರ: ನವೆಂಬರ್ 29ರಿಂದ ಡಿಸೆಂಬರ್ 4ರ ವರೆಗೆ ಕಾಜುಭಾಗದ ಮಹಾಸತಿ ಮಂಟಪದಲ್ಲಿ ಉಚಿತ ಯೋಗ ಹಾಗೂ ಯುನಾನಿ ಚಿಕಿತ್ಸಾ ಶಿಬಿರ ನಡೆಯಲಿದೆ.
ಪ್ರತಿ ದಿನ ಬೆಳಗ್ಗೆ 6:30 ರಿಂದ 7:30 ರವರೆಗೆ ಶಿಬಿರವನ್ನು ನಡೆಸಲಾಗುತ್ತದೆ. ರೋಟರಿ ಕ್ಲಬ್ ಆಫ್ ಕಾರವಾರ ಸೀಸೈಡ್ ಹಾಗೂ ಆಯುಷ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಶಿಬಿರ ಸಂಘಟಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತೆ ರೋಟರಿ ಕ್ಲಬ್ ಆಫ್ ಸೀಸೈಡನ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಬ. ಹಿರೇಮಠ ಮನವಿ ಮಾಡಿದ್ದು, ಮಾಹಿತಿಗಾಗಿ 9481885134, 9242877085 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Leave a Comment