ಕಾರವಾರ:
ಡಾ. ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮದ ವತಿಯಿಂದ ಪರಿಶಿಷ್ಟ ಜಾತಿಯ ಯುವಕ ಯುವತಿಯರಿಗೆ ಕೌಶಲ್ಯಾಭಿವೃದ್ದಿ ತರಬೇತಿಗೆಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ನವ್ಹಂಬರ 28 ಕೊನೆಯ ದಿನವಾಗಿರುತ್ತದೆ. ಅರ್ಹ ಅಭ್ಯರ್ಥಿಗಳು 18 ರಿಂದ 40 ವರ್ಷ ವಯೋಮಿತಿಯವರಾಗಿರಬೇಕು. ಆಪರೇಟರ್ ಕನ್ವೆನ್ಸನಲ್ ಟರ್ನಿಂಗ್, ಪಿಟ್ಟರ್ ಮೆಕಾನಿಕಲ್ ಅಸಂಬ್ಲಿ, ಆಪರೇಟರ್ ಕನ್ವೆನ್ಸಿಯಲ್ ಮಿಲ್ಲಿಂಗ್, ಆಪರೇಟರ್ ಕನ್ವೆನ್ಸಿಯಲ್ ಸರ್ಫೆಸ್ ಗ್ರೈಂಡಿಂಗ್ ಮಶಿನ್, ಸಿಎನ್ಸಿ ಆಪರೇಟರ್ ವರ್ಟಿಕಲ್ ಮಶಿನಿಂಗ್ ಸೆಂಟರ್, ವೆಲ್ಡಿಂಗ್ ಅಶಿಸ್ಟಂಟ್, ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪರೇಟರ್, ಅಗ್ರಿಕಲ್ಚರಲ್-ಟ್ರಾಕ್ಟರ ಆಪರೇಟರ್, ಬ್ಯೂಟಿ ಆ್ಯಂಡ್ ವೆಲನಸ್ ಅಶಿಸ್ಟಂಟ್ ಬ್ಯೂಟಿ ತೆರಪಿಸ್ಟ್, ಥ್ರೋ ಹೋಲ್ ಅಸೆಂಬ್ಲಿ ಆಪರೇಟರ್, ಪಿಸಿಬಿ ಅಸೆಂಬ್ಲಿ ಆಪರೇಟರ್, ಮ್ಯಾನುವೆಲ್ ಶೋಲ್ಡರಿಂಗ್ ಟೆಕ್ನಿಶಿಯನ್, ಟೆಲಿಕಾಂ-ಟವರ್ ಟೆಕ್ನಿಶಿಯನ್, ಟೆಲಿಕಾಂ-ಆಪ್ಟಿಕಲ್ ಪೈಬರ್ ಟೆಕ್ನಿಶಿಯನ್, ಸ್ಪೋಟ್ರ್ಸ್- ಲೈಫ್ಗಾರ್ಡ-ಪೂಲ ಆ್ಯಂಡ್ ಬಿಚ್, ರಿಟೆಲ್-ಡಿಸ್ಟ್ರೂಬ್ಯೂಟ್ ಸೆಲ್ಸ್ಮ್ಯಾನ್, ರಿಟೆಲ್-ಸೆಲ್ಸ್ ಅಸೋಶಿಯಟ್ಸ್, ಸೆಕ್ಯೂರಿಟಿ-ಅನ್ರಮೆಡ್ ಸೆಕ್ಯೂರಿಟಿಗಾರ್ಡ ತರಬೇತಿಗಳಿಗೆ ಎಸ್.ಎಸ್.ಎಲ್.ಸಿ ಉತ್ತಿರ್ಣ ಅಥವಾ ಅನುತ್ತೀರ್ಣರಾಗಿರಬೇಕು.
ಪಿ.ಯು.ಸಿ ಉತ್ತಿರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳಿಗೆ ಪಿಲ್ಡ್ ಟೆಕ್ನೆಸಿಯನ್ ಕಂಪ್ಯೂಟಿಂಗ್ ಆ್ಯಂಡ್ ಪೆರಿಪೆರಲ್ಸ್, ಮಿಡಿಯಾ ಆ್ಯಂಡ್ ಎಂಟರಟೇನ್ಮೇಂಟ್ ಆನಿಮ್ಯಾಟರ್, ಲಾಜಿಸ್ಟಿಕ್ ಕನ್ಸನ್ಮೆಂಟ್ ಬೂಕಿಂಗ್ ಅಶಿಸ್ಟಂಟ್, ಎಲೆಕ್ಟ್ರಾನ್ ಆ್ಯಂಡ್ ಹಾರ್ಡ್ವೆರ್-ಮೊಬೈಲ್ ಫೋನ್ ಹಾರ್ಡ್ವೆರ್ ರಿಪೆರಿ ಟೆಕ್ನಿಸಿಯನ್, ಎಲೆಕ್ಟ್ರಾನ್ ಆ್ಯಂಡ್ ಹಾರ್ಡ್ವೆರ್ ಪಿಲ್ಡ್ ಟೆಕ್ನಿಸಿಯನ್ ಕಂಪ್ಯೂಟೆರಿಂಗ್ ಆ್ಯಂಡ್ ಪೆರಿಪೆರಲ್ಸ್, ಆಟೋಮೊಟಿವ-ಶೊರ್ರೂಮ್ ಹೊಟೆಸಟ್-ಕಸ್ಟಮರ್ ರಿಲೆಶನ್ಶಸಿಫ್ ಎಕ್ಸಿಕ್ಯೂಟಿವ್, ಆಟೋಮೋಟಿವ್-ಡಿಲರ್ಶಿಫ್ ಸೆಲ್ಸ್ ಆ್ಯಂಡ್ ವ್ಯಾಲ್ಯೂ ಆ್ಯಡೆಡ್ ಸರ್ವಿಸ್ ಎಕ್ಸಿಕ್ಯೂಟಿವ್, ಟೂರಿಸಂ ಆ್ಯಂಡ್ ಹಾಸ್ಪಿಟಲಿಟಿ-ಪ್ರೋಂಟ್ ಆಫೀಸ್ ಅಸೊಸಿಯಟ್, ಟೂರಿಸಂ ಆ್ಯಂಡ್ ಹಾಸ್ಪಿಟಲಿಟಿ ಕೌಂಟರ್ ಸೆಲ್ಸ್ ಎಕ್ಸಿಕ್ಯೂಟಿವ್, ಟೆಲಿಕಾಮ್ ಕಸ್ಟಮರ್ ಎಕ್ಸಿಕ್ಯೂಟಿವ್, ಟೆಲಿಕಾಮ್-ಇನ್-ಸ್ಟೋರ್ ಪ್ರೋಮೊಟರ್, ಸ್ಪೋಟ್ರ್ಸ್-ಪಿಟ್ನೆಸ್ಸ್ ಟೈನರ್, ಸ್ಪೋಟ್ರ್ಸ್-ಮಾಸ್ಸೆರ್ ತರಬೇತಿಗಳನ್ನು ನೀಡಲಾಗುವದು.
ಅರ್ಜಿದಾರರು ತಮ್ಮ ಹೆಸರು, ವಿಳಾಸ, ಮೊಬೈಲ್ಸಂಖ್ಯೆ, ವಯಸ್ಸು ವಿದ್ಯಾರ್ಹತೆ, ಹಾಗೂ ಪಡೆಯಲಿಚ್ಛಿಸುವ ತರಬೇತಿಯ ಹೆಸರಿನೊಂದಿಗೆ ಮೂಲ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್.ಅಂಬೇಡ್ಕರ ಅಭಿವೃದ್ದಿ ನಿಗಮ, ಹಳೆ ಜಿಲ್ಲಾ ಪಂಚಾಯತ್ ಕಟ್ಟಡ, ತಹಸೀಲ್ದಾರ ಕಚೇರಿ ಹಿಂದು ಗಡೆ ನೆಲಮಹಡಿ ಉತ್ತರಕನ್ನಡ ಜಿಲ್ಲೆ ಕಾರವಾರ (08382-226903) ಇಲ್ಲಿಗೆ ಕಳುಹಿಸಬಹುದಾಗಿದೆ ಎಂದು ನಿಗಮದ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment