ಕಾರವಾರ: ಗೋವಾ ಸರ್ಕಾರ ಕಾರವಾರದ ಕೆಲ ಹಳ್ಳಿಗೆ ಶಾಲಾ ಬಸ್ ಓಡಿಸುತ್ತಿದೆ. ಪರಿಣಾಮ ಕನ್ನಡಿಗರು ಗೋವಾ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಕರ್ನಾಟಕ ಸರ್ಕಾರದಿಂದ ಗಡಿನಾಡ ಕನ್ನಡದ ಮಕ್ಕಳಿಗೆ ಕನ್ನಡ ಕಲಿಸುವ ಯಾವದೇ ವಿಶೇಷ ಪ್ರಯತ್ನ ಮಾತ್ರ ನಡೆಸಿಲ್ಲ.
ಪ್ರತಿದಿನ ಮುಂಜಾನೆ ಗೋವಾದ ಬಸ್ಗಳು ಕಾರವಾರದ ಕೆಲ ಗ್ರಾಮಗಳಿಗೆ ಆಗಮಿಸಿ ಇಲ್ಲಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತದೆ. ಸಂಜೆ ಹಿಂತಿರುಗಿ ಮನೆಗೆ ಬಿಡುತ್ತದೆ. ಗೋವಾದಲ್ಲಿ ಶಿಕ್ಷಣ ಪಡೆದ ಮಕ್ಕಳಿಗೆ ಭವಿಷ್ಯದಲ್ಲಿ ಖಚಿತ ಉದ್ಯೋಗದ ಭರವಸೆಯನ್ನು ಅಲ್ಲಿನ ಸರ್ಕಾರ ನೀಡಿದೆ. ಕನ್ನಡಿಗರ ಮಕ್ಕಳು ಕನ್ನಡ ಮರೆತು ಕೊಂಕಣಿ ಗೋವಾ ಶಿಕ್ಷಣದತ್ತ ಆಕರ್ಶಿತರಾಗುತ್ತಿದ್ದಾರೆ. ಇದರಿಂದ ಮೂಲ ಕನ್ನಡಿಗರಿಗೆ ಮಾತ್ರ ಭಾಷೆ ಮೇಲಿನ ಮಮತೆಯೇ ಕಡಿಮೆಯಾಗುತ್ತಿದೆ. ವಿವಿಧ ಯೋಜನೆಗಳಿಂದ ಗೋವಾದ ಸರ್ಕಾರಿ ಶಾಲೆಗಳಲ್ಲಿಯೂ ಮಕ್ಕಳ ಸಂಖ್ಯೆ ಹೆಚ್ಚಿದೆ. ಅದರಲ್ಲಿ ಕನ್ನಡಿಗರ ಮಕ್ಕಳದ್ದೆ ಮೇಲುಗೈ. ಅಂಕಗಳಿಗೆ ಮಾತ್ರವಲ್ಲದೇ ಕ್ರೀಡೆ, ಮನರಂಜನೆಯಂತಹ ಪಠ್ಯೇತರ ವಿಷಯಗಳಲ್ಲಿಯೂ ಕನ್ನಡಿಗರ ಮಕ್ಕಳು ಒಂದು ಹೆಜ್ಜೆ ಮುಂದಿದ್ದಾರೆ. ಆದರೆ ಕರ್ನಾಟಕ ಸರ್ಕಾರಿದಂದ ಇವರನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿಲ್ಲ.
ಗೋವಾ ಸರ್ಕಾರದ ಯೋಜನೆಗೆ ಮಕ್ಕಳ ಪಾಲಕರು ಮಾರು ಹೋಗಿದ್ದಾರೆ. ಮನೆ ಕಾರವಾರದಲ್ಲಿದ್ದರೂ ಅವರ ಮನಸ್ಸು ಗೋವಾದಲ್ಲಿರುತ್ತದೆ. ಬಹುತೇಕ ಪಾಲಕರು ಗೋವಾದಲ್ಲಿಯೇ ಕೂಲಿ ಕೆಲಸವನ್ನು ನೆಚ್ಚಿಕೊಂಡಿದ್ದಾರೆ. ಅವರ ಆದಾಯದ ಮೂಲ, ಮಕ್ಕಳ ಶೈಕ್ಷಣಿಕ ಹೋಣೆಯನ್ನು ಗೋವಾ ಹೊತ್ತಿದೆ. ಗೋವಾ ಗಡಿ ಪ್ರದೇಶದಲ್ಲಿರುವ ರಾಜ್ಯದ ಜನತೆ ಹಾಗೂ ವಿದ್ಯಾಥಿ9ಗಳು ಅಲ್ಲಿನ ಯೋಜನೆ ನೋಡಿ ಅತ್ತ ಆಕರ್ಶಣೆ ಸಾಮಾನ್ಯವಾದರೂ, ಕನ್ನಡ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಅಲ್ಲಿನ ಯೋಜನೆಗಳು ನಮಗಿಲ್ಲವಲ್ಲ ಎಂದು ಅವಲತ್ತುಕೊಳ್ಳುವದು ಇದೆ. ಗೋವಾದಲ್ಲಿ ಇವೆಲ್ಲ ಯೋಜನೆಗಳ ರೂವಾರಿ ಅಲ್ಲಿನ ಮುಖ್ಯಮಂತ್ರಿ ಮನೋಹರ ಪರಿಕ್ಕರ್. ಶೈಕ್ಷಣಿಕವಾಗಿ ಮುಂದುವರೆದಾಗ ಮಾತ್ರ ರಾಜ್ಯ ಸುಭೀಕ್ಷೆಯ ಫಲ ನೀಡುತ್ತದೆ ಎಂಬ ನಂಬಿಕೆ ಅವರಲ್ಲಿದೆ. ಆದ್ದರಿಂದಲೇ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದು, ಹಾಜರಾತಿಯಲ್ಲಿ ಇಳಿಮುಖ ಮತ್ತಿತರ ವಿಷಯಗಳ ಕುರಿತು ಅವರೇ ಸ್ವತ: ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಚಚೆ9 ನಡೆಸಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸುವದು, ಅವರಿಗೆ ಸಂಪರ್ಕ, ಮಾಹಿತಿ ನೀಡುವದು. ಪಾಲಕರಲ್ಲಿ ಉದ್ಯೋಗದ ಭರವಸೆ ನೀಡಿ ವಿಶ್ವಾಸ ಮೂಡಿಸುವದು ಸೇರಿದಂತೆ ಹತ್ತು ಹಲವು ರೀತಿಯ ಪ್ರಯತ್ನದಲ್ಲಿ ಯಶಸ್ಸು ಕಂಡು ಗ್ರಾಮೀಣ ಮಕ್ಕಳನ್ನು ಮುಖ್ಯ ವಾಹಿನಿಗೆ ತರಲು ಯತ್ನಿಸಿದ್ದಾರೆ. ಇದರಿಂದ ಕನ್ನಡ ನೆಲದ ಮಕ್ಕಳು ಕೂಡ ಗೋವಾದ ಸರ್ಕಾರಿ ಶಾಲೆಯ ಪ್ರಜೆಗಳಾಗಿದ್ದಾರೆ. ಪ್ರತಿದಿನ ಮಕ್ಕಳನ್ನು ಒಯ್ಯಲು ಅಲ್ಲಿನ ಸಕಾ9ರಿ ಸಾರಿಗೆ ಸಂಸ್ಥೆಯಾದ ಕದಂಬ ಟ್ರಾನ್ನ್ಪೆÇೀಟ್9 ಕಾಪೆÇೀ9ರೇಶನ್ ಆಗಮಿಸುತ್ತದೆ. ಇದಲ್ಲದೇ ಹತ್ತು ಹಲವು ಖಾಸಗಿ ಬಸ್ಗಳು ಕೂಡ ಮಕ್ಕಳನ್ನು ಆಮಂತ್ರಿಸುತ್ತವೆ. ಗೋವಾದಲ್ಲಿ 63 ಸಕಾ9ರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಹಾಗೂ ಶಾಲೆಯಿಂದ ಮಕ್ಕಳನ್ನು ಮರಳಿ ಊರಿಗೆ ಬಿಡುವ ಯೋಜನೆ ಯಶಸ್ವಿಯಾಗಿ ದಾಫುಗಾಲು ಹಾಕುತ್ತಿದೆ.
ಗೋವಾ ಶಾಲೆಯಲ್ಲಿ ದಿನೇ ದಿನೆ ಮಕ್ಕಳ ಮಕ್ಕಳ ಹಾಜರಾತಿ ಏರುತ್ತಿದೆ. ಶಿಕ್ಷಣದಿಂದ ವಂಚಿತರಾಗಿದ್ದ ಗಡಿಗ್ರಾಮದ ವಿದ್ಯಾರ್ಥಿಗಳು ಗೋವಾದತ್ತ ಪಯಣ ಬೆಳಸಿದ್ದಾರೆ. ಮಕ್ಕಳನ್ನು ಒಯ್ಯಲು ಅಲ್ಲಿನ ಸರ್ಕಾರ ಮೊದಲ ಹಂತದಲ್ಲಿ 20 ಮಿನಿ ಬಸ್ ಖರಿದಿಸಿ, ನಂತರ ಮತ್ತೆ 60 ಮಿನಿ ಬಸ್ಗಳನ್ನು ಖರಿದಿಸಿದೆ. ಬೆಳಗ್ಗೆ 7ರಿಂದ 9 ಹಾಗೂ ಮಧ್ಯಾಹ್ನ 12 ರಿಂದ 2 ಗಂಟೆ ಅವಧಿಯಲ್ಲಿ ಈ ಬಸ್ಗಳು ವಿದ್ಯಾರ್ಥಿಗಳ ಸೇವೆಯಲ್ಲಿರುತ್ತವೆ. ಶಾಲಾ ಅವಧಿಯ ನಂತರ ಉಳಿದ ಪ್ರಯಾಣಿಕರ ಸೇವೆಗೆ ಈ ಬಸ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗೋವಾದ ಶೈಕ್ಷಣಿಕ ಯೋಜನೆಗಳು ಕರ್ನಾಟಕ ಮಕ್ಕಳನ್ನು ಸೆಳೆದಿವೆ. ಕನ್ನಡಿಗರು ಇಲ್ಲಿಲ್ಲದ ಸೌಲಭ್ಯದಿಂದ ಅಲ್ಲಿ ಪಯಣ ಬೆಳೆಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಕುಗ್ರಾಮ, ಸಾರಿಗೆ ಸಂಪರ್ಕ ರಹಿತ ಊರುಗಳಿದ್ದು ಮುಖ್ಯಮಂತ್ರಿಗಳು ದೃಡ ಸಂಕಲ್ಪ ತೊಟ್ಟಲ್ಲಿ ಗೋವಾ ಮಾದರಿಯ ಸೇವೆಯನ್ನು ಇಲ್ಲಿಯೂ ಜಾರಿಗೊಳಿಸಬಹುದಾಗಿದೆ. ಇದರಿಂದ ಕನ್ನಡದ ಕುಗ್ರಾಮ ಹಾಗೂ ಗಡಿಭಾಗದಲ್ಲಿನ ಮಕ್ಕಳು ಅಕ್ಷರ ಭಾಗ್ಯ ಕಂಡುಕೊಳ್ಳಲು ಸಹಾಯವಾಗುತ್ತದೆ.
Leave a Comment