ಕಾರವಾರ: ನಗರದ ಹೈ ಚರ್ಚ ರಸ್ತೆಯಲ್ಲಿ ನೂತನವಾಗಿ ಸಂಗೀತ ತರಗತಿಯನ್ನು ಆರಂಭಿಸಲಾಗಿದೆ.
ಸೋಮವಾರ ಸಂಜೆ ಗಾಯಕಿ ಲತಾ ಹೆಗಡೆ ಸಂಗೀತ ತರಗತಿಯನ್ನು ಉದ್ಘಾಟಿಸಿದರು. ಇದಕ್ಕೂ ಮೊದಲು ಶಾರದಾ ಪೂಜೆ ನಡೆಯಿತು. ನಂತರ ಲತಾ ಹೆಗಡೆ ತಂಡದವರಿಂದ ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಲಾಯಿತು. ಗಾಯಕರಾದ ಗೌರಿಶ್ ಯಾಜಿ, ತಬಾಲಾ ವಾದಕ ಭಾರ್ಗವ ಹೆಗಡೆ ಭಾಗವಹಿಸಿದ್ದರು. ಪ್ರಮುಖರಾದ ಶ್ಯಾಮಲಾ ಭಟ್ಟ, ಪಿ.ಎಸ್. ಭಟ್ಟ, ಮಾರುತಿ ಕಮಾತ್, ಅಶೋಕ ಶೆಟ್ಟಿ ಕಾರ್ಯಕ್ರಮದಲ್ಲಿದ್ದರು. ವಾರಕ್ಕೊಮ್ಮೆ ಇಲ್ಲಿ ಸಂಗೀತ ತರಗತಿ ನಡೆಸಲಾಗುತ್ತಿದ್ದು, ಆಸಕ್ತರು 9449263944 ಹಾಗೂ 8762609279 ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
Leave a Comment