ಕಾರವಾರ: ಭಾರತೀಯ ನೌಕಾ ನೆಲೆಯು ನೌಕಾ ದಿನಾಚರಣೆ ಅಂಗವಾಗಿ ನವೆಂಬರ್ 5 ರಂದು ಬೆಳಗ್ಗೆ 9 ಗಂಟೆಯಿಂದ ಮದ್ಯಾಹ್ನ 12 ಗಂಟೆಯವರೆಗೆ ಕಾರವಾರ ದೈವಜ್ಞ ಕಲ್ಯಾಣ ಮಂಟಪದಲ್ಲಿ ಶಾಲಾ ಮಕ್ಕಳಿಗಾಗಿ ಡ್ರಾಯಿಂಗ್ ಮತ್ತು ಪೆಂಟಿಂಗ್ ಸ್ಪರ್ಧೇ ಆಯೋಜಿಸಿದೆ.
ಸ್ಪರ್ಧೇಯನ್ನು ಮಕ್ಕಳ ವಯಸ್ಸಿಗನುಸಾರವಾಗಿ ನಾಲ್ಕು ಗುಂಪುಗಳಲ್ಲಿ ನಡೆಸಲಾಗುವದು. ಆಸಕ್ತ ಮಕ್ಕಳು ಸ್ಪರ್ಧೇ ದಿನದಂದು ತಮ್ಮ ಶಾಲಾ ಗುರುತಿನ ಚೀಟಿಯೊಂದಿಗೆ ಬೆಳಗ್ಗೆ 8.30 ರೊಳಗೆ ಹಾಜರಿರಬೇಕು. ಹೆಚ್ಚಿನ ಮಾಹಿತಿಗಾಗಿ 08382-231005 ಸಂಪರ್ಕಿಸಬಹುದಾಗಿದೆ.
Leave a Comment