ಹೊನ್ನಾವರದ ಲಾಯನ್ಸ್ ಕ್ಲಬ್ನಿಂದ ನಡೆಸಿದ ಉಚಿತ ಬೃಹತ್ ಕಣಣಿನ ಪೊರೆ ತಪಾಸಣೆಯನ್ನು ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು.
ತಾಲೂಕಿನ ಗ್ರಾಮೀಣ ಭಾಗದ 140 ಕ್ಕೂ ಹೆಚ್ಚಿನ ವೃದ್ಧರು, ಬಡಜನರು ಶಿಬಿರದಲ್ಲಿ ಫಲಾನುಭವಿಗಳಾಗಿದ್ದರು. ಅವರಲ್ಲಿ ಆಯ್ದ 23 ಜನರನ್ನು ಕುಮಟಾದ ಲಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕಣ್ಮಣಿ ಜೋಡಿಸಲಾಯಿತು.
ಶಿಬಿರವನ್ನುÀ ಉದ್ಘಾಟಸಿದ ಲಯನ್ಸ್ ಅಧ್ಯಕ್ಷರಾದ ಲ.ದೇವಿದಾಸ ಮಡಿವಾಳÀಮಾತನಾಡಿ ಶಿಬಿರಾರ್ಥಿಗಳಿಗೆ ಶಿಬಿರದ ಪ್ರಯೋಜನ ಪಡೆಯುವಂತೆ ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು.
ಕಣ್ಣಿನ ವೈದ್ಯರಾದ ಡಾ||ನವೀನಕುಮಾರ ಬೆಲವಾಡಿ ಮತ್ತು ಹೆಲ್ತ ಕಮೀಟಿಯ ಚೆಯರ್ಮನ್ ಹಾಗೂ ಆಸ್ಪತ್ರೆಯ ಸ್ಥಳಾವಕಾಶ ನೀಡಿದ ಡಾ||ವಿ.ಚಂದ್ರಶೇಖರ ಶೆಟ್ಟಿ ಕಣ್ಣಿನ ರಕ್ಷಣೆಯ ಕುರಿತು ತಿಳಿಸಿದರು.
ರಿಜನ್ ಚೆಯರ್ ಪರ್ಸನ್ ಲಾ.ಜಿ.ವಿ.ಬಿಂದಗಿ . ಕಾರ್ಯದರ್ಶಿ ಲಾ.ಪ್ರದೀಪ ಶೆಟ್ಟಿ ವಂದಿಸಿದರು. ಕಾರ್ಯಕ್ರಮದಲ್ಲಿ ಖಜಾಂಚಿ ಲಾ.ಎಂ.ವಿ.ನಾಯ್ಕ, ಲಾ.ಶೇಖರ ನಾಯ್ಕ, ಲಾ.ಎಸ್.ಜೆ.ಕೈರನ್ನ, ಲಾ.ಜೀವತ್ತೋಮ ನಾಯ್ಕ, ಲಾ.ಎಸ್.ಟಿ.ನಾಯ್ಕ, ಲಾ.ಎನ್.ಜಿ.ಭಟ್ಟ, ಲಾ.ಆರ್,.ಡಿ.ನಾಯ್ಕ, ಲಾ.ಶಾಂತರಾಮ ನಾಯ್ಕ, ಲಾ.ಮಂಜು ಆಚಾರ್ಯ, ಲಾ.ರಾಜೇಶ ಸಾಲೆಹಿತ್ತಲ್, ಲಾ.ಸಂತೋಷ ನಾಯ್ಕ ಭಾಗವಹಿಸಿದರು. ಜೋನ್ ಚೆಯರ್ ಪರ್ಸನ್ ಲಾ.ಸಂಜಯ ಆರುಂಡೇಕರ ಶಸ್ತ್ರ ಚಿಕಿತ್ಸೆ ಒಳಪಟ್ಟ ರೋಗಿಗಳಿಗೆ ಶುಭ ಹಾರೈಸಿದರು. ಪ್ರಾಯೋಜಕತ್ಮವನ್ನು ಕಲ್ಬಾಗಕರ ಟ್ರಸ್ಟ್ ಮುಂಬೈ ವಹಿಸಿದ್ದರು.
Leave a Comment