• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಮತ್ತು ಸಂಘದ ಕಾರ್ಯಕರ್ತರ ಮೇಲೆ ನಿರಂತರ ಹಿಂಸೆ;ರಾಷ್ಟ್ರಪತಿಗಳಿಗೆ ಮನವಿ

November 4, 2017 by Sachin Hegde Leave a Comment

ಹಳಿಯಾಳ: ಕೇರಳ ರಾಜ್ಯದಲ್ಲಿ ಆಡಳಿತಾರೂಢ ಕಮ್ಯುನಿಷ್ಟ(ಮಾವೋವಾದಿ)ಕಾರ್ಯಕರ್ತರಿಂದ ಸತತವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಮತ್ತು ಸಂಘದ ಕಾರ್ಯಕರ್ತರ ಮೇಲೆ ನಿರಂತರ ಹಿಂಸೆ ನಡೆಯುತ್ತಿರುವುದನ್ನು ಖಂಡಿಸಿ ಹಳಿಯಾಳ ಅಭಾವಿಪನ ಘಟಕ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಯಿತು.
ಮನವಿಯಲ್ಲಿ ಕೇರಳ ರಾಜ್ಯದಲ್ಲಿ ಕಮ್ಯುನಿಷ್ಟ ಪಕ್ಷದ ಕಾರ್ಯಕರ್ತರಿಂದ ಸತತವಾಗಿ ಅಭಾವಿಪ ಮತ್ತು ಸಂಘದ ಕಾರ್ಯಕರ್ತರ ಮೇಲಾಗುತ್ತಿರುವ ಹಿಂಸೆಯ ವಿರುದ್ಧವಾಗಿ ಎಬಿವಿಪಿ ದಿ.11 ನವೆಂಬರ್2017 ರಂದು ಕೇರಳದ ರಾಜಧಾನಿ ತಿರುವನಂತಪುರಂದಲ್ಲಿ 50ಸಾವಿರ ವಿದ್ಯಾರ್ಥಿಗಳ ಮಹಾರ್ಯಾಲಿ ಹಮ್ಮಿಕೊಳ್ಳಲು “ಚಲೋ ಕೇರಳ” ಎಂದು ಕರೆ ಕೊಟ್ಟಿದೆ. ಎಬಿವಿಪಿ ಕಾರ್ಯಕರ್ತರ ಹತ್ಯೆಗಳಿಗೆ ನ್ಯಾಯಒದಗಿಸಲು ಆಗ್ರಹಿಸುವ ಜೊತೆಗೆ, ಕೇರಳ ರಾಜ್ಯದಲ್ಲಿ ಕಮ್ಯುನಿಷ್ಟ ಗೂಂಡಾಗಳಿಂದ ನಡೆಯುತ್ತಿರುವ ಕ್ರೂರ ಹಿಂಸೆಯ ವಿರುದ್ಧವಾಗಿ ಬೃಹತ್ ಹೋರಾಟ ನಡೆಯಲಿದ್ದು ಇದಕ್ಕೆ ತಮ್ಮ ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದೆ.
ಕೇರಳದಂತಹ ಸುಂದರ ಭೂಮಿಯಲ್ಲಿ ಕಮ್ಯುನಿಷ್ಟ ಪಾರ್ಟಿಆರ್ಫ ಇಂಡಿಯಾ– ಮಾರ್ಕಿಸ್ಟ್ ಸಿಪಿಐಎಮ್ ತನ್ನ ವಿರೋಧಿ ವಿಚಾರದ ಕಾರ್ಯಕರ್ತರ ಬರ್ಬರ ಹತ್ಯೆ ಮಾಡುತ್ತಿದೆ. ಯಾವ ಭೂಮಿ ಪ್ರಕೃತಿಯಿಂದ ಸುಂದರವಾಗಿದೆಯೋ “ದೇವರ ನಾಡು” ಎಂದು ಖ್ಯಾತಿ ಪಡೆದಿರುವ ಪುಣ್ಯ ಭೂಮಿಯಲ್ಲಿ ಸಿಪಿಐಎಮ್ ಗೂಂಡಾಗಳು ತನ್ನ ಆಡಳಿತ ಸರಕಾರದ ಬೆಂಬಲದಲ್ಲಿ ಹಿಂಸಾಚಾರ ನಡೆಸುತ್ತಿದ್ದು ಈ ಹಿಂಸಾಚಾರದ ವಿರುದ್ಧವಾಗಿ ಅಭಾವಿಪ ಕಾರ್ಯಕರ್ತರು ಸತತವಾಗಿ ಸಂಘರ್ಷ ಮಾಡುತ್ತಾ ಬಂದಿದ್ದಾರೆ. ಆದರೆ ಕೇರಳದಲ್ಲಿ ಯಾವಾಗ ಸಿಪಿಐಎಮನ ಸರಕಾರ ಜಾರಿಗೆ ಬರುತ್ತೋ ಆಗ ಕೆಂಪು ಭಯೋತ್ಪಾದನೆಯ ದಾಳಿಗಳು ಹೆಚ್ಚಾಗುತ್ತವೆ. ವಿಶೇಷವಾಗಿ ಕಣ್ಣೂರು ಜಿಲ್ಲೆಯಲ್ಲಿ ಸ್ವತಃಅಲ್ಲಿನ ಸಿಪಿಐಎಮ್‍ನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಅದೇ ಪಕ್ಷದ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಈ ಕುಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಆಪಾದಿಸಲಾಗಿದೆ.
ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಕಳೆದ ಮೇ 2016 ರಂದು ಅಧಿಕಾರಕ್ಕೆ ಬಂದಾಗಿನಿಂದ ಈ ರೀತಿಯ ಹತ್ಯೆಗಳು ಹೆಚ್ಚಾಗಿದ್ದು. ಕಳೆದ 16 ತಿಂಗಳ ಸರ್ಕಾರz Àಅವಧಿಯಲ್ಲಿ 14 ಕ್ಕೂ ಹೆಚ್ಚು ಸಂಘ ಪರಿವಾರದ, ರಾಷ್ಟ್ರೀಯವಾದಿ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳು ನಡೆದಿವೆ. ಕಣ್ಣೂರು ಜಿಲ್ಲೆಯಲ್ಲಿ 05 ಹತ್ಯೆಗಳು ನಡೆದಿವೆ. ಇಲ್ಲಿಯವರೆಗೂ ಕೇರಳದಲ್ಲಿ ಈ ರೀತಿಯ 250 ಕ್ಕೂ ಹೆಚ್ಚು ಹತ್ಯೆಗಳು ಕಮ್ಯನಿಷ್ಟ್ ಪಕ್ಷದ ಗೂಂಡಾಗಳಿಂದ ನಡೆದಿರುವುದು ಕೇವಲ ಸಂಘ ಪರಿವಾರರದ್ದಲ್ಲದೆ ಇಡೀ ಮಾನವೀಯತೆಗೇ ಧಕ್ಕೆ ತರುವ ಕುಕೃತ್ಯವಾಗಿದ್ದು ರಾಷ್ಟ್ರಪತಿಗಳು ಈ ಬಗ್ಗೆ ಗಮನ ಹರಿಸಿ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಲಾಗಿದೆ.
ಕೇರಳ ರಾಜ್ಯದಲ್ಲಿಕಮ್ಯುನಿಷ್ಟರ ಪ್ರಜಾತಂತ್ರ ವಿರೋಧಿ ನಡೆ ವಿರೋಧಿಸಿ ಮತ್ತು ದಲಿತ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ವನವಾಸಿಗಳ ಕೊಲೆ, ವಿದ್ಯಾರ್ಥಿಗಳ ಕೊಲೆ, ಸಾಮಾಜಿP Àಕಾರ್ಯಕರ್ತರ ಕೊಲೆ ಈ ಎಲ್ಲ ಹಿಂಸಾಚಾರಗಳ ವಿರುದ್ಧ ವಿದ್ಯಾರ್ಥಿ ಮತ್ತು ಯುವ ಸಮುದಾಯ “ಚಲೋ ಕೇರಳ” ಹೋರಾಟಕ್ಕೆ ಕರೆ ನೀಡಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಕೇರಳಕ್ಕೆ ತೆರಳಿ ಹೋರಾಟದಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ಕಾರ್ಯಕರ್ತರಾದ ತಾಲೂಕಾ ಸಂಚಾಲಕ ಸಾಗರ, ವಿದ್ಯಾರ್ಥಿನಿ ಪ್ರಮುಖರಾದ ಆರ್ಚನಾ, ರೋಹನ, ಅಪ್ಪಾಸಾಹೇಬ, ಚೇತನ, ಅರುಣ, ಅರ್ಪಿತಾ, ಅಶ್ವಿನಿ, ಮನೋಜ ಇತರರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: (ಎಬಿವಿಪಿ), 50ಸಾವಿರ ವಿದ್ಯಾರ್ಥಿಗಳ, ಅಖಿಲ ಭಾರತೀಯ, ಅಭಾವಿಪನ, ಆಡಳಿತಾರೂಢ, ಕಮ್ಯುನಿಷ್ಟ, ಕೇರಳ ರಾಜ್ಯ, ಘಟಕ, ಚಲೋ ಕೇರಳ, ನಿರಂತರ ಹಿಂಸೆ, ಪಟ್ಟಣ, ಮತ್ತು, ಮಾವೋವಾದಿ, ಮೇಲೆ, ರಾಷ್ಟ್ರಪತಿಗಳಿಗೆ ಮನವಿ, ವಿದ್ಯಾರ್ಥಿ ಪರಿಷತ್, ಸಂಘದ ಕಾರ್ಯಕರ್ತರ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar