ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೋಡಿಮುಕ್ತ ಗ್ರಾಮ ಯೋಜನೆಯಡಿ ಶೇ.70.48ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲೆ ಭೂದಾSಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಎಸ್.ವೇಣುಗೋಪಾಲ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿದ ರೈತಸ್ನೇಹಿ ಯೋಜನೆಯಾದ ಪೋಡಿಮುಕ್ತ ಗ್ರಾಮ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 2015ರಿಂದ ಸೆಪ್ಟೆಂಬರ್ 2017ರವರೆಗೆ 35,053 ಬ್ಲಾಕ್ಗಳನ್ನು ಅಳತೆ ಮಾಡಿದ್ದು ಶೇ.70.48ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 11 ತಾಲೂಕುಗಳಲ್ಲಿ 1338 ಗ್ರಾಮಗಳಿದ್ದು 510 ಗ್ರಾಮಗಳ 49,736 ಬ್ಲಾಕ್ಗಳನ್ನು ಪೋಡಿಮುಕ್ತ ಗ್ರಾಮ ಯೋಜನೆಯಡಿ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ 35,053 ಬ್ಲಾಕ್ಗಳ ಅಳತೆ ಪ್ರಕ್ರಿಯೆ ಮುಗಿದಿದ್ದು ಸರ್ವೆ ದಾಖಲೆ ಮುಗಿದು ಹೊಸದಾಗಿ 33,419 ಪಹಣಿಗಳನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ, ತಕರಾರು ಪ್ರಕರಣಗಳು, ದಾಯಾದಿ ಕಲಹದ ಪ್ರಕರಣಗಳೂ ಸೇರಿದಂತೆ ವಿವಿಧ ಖಾತೆದಾರರಿಂದ ಪೋಡಿ ಬೇಡವೆಂದು ಹೇಳಿಕೆ ನೀಡಿದ 14,683 ಪ್ರಕರಣಗಳನ್ನು ವಿಲೇವಾರಿ ಮಾಡಿ ಜಿಲ್ಲೆಯಲ್ಲಿ ಈವರೆಗೆ ಶೇ.70.48ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಅವರು ತಿಳಿದ್ದಾರೆ.
Leave a Comment