ಕಾರವಾರ ನವೆಂಬರ 04: ಕೈಗಾ ಅಣುವಿದ್ಯುತ್ ಸ್ಥಾವರ “ಕೈಗಾ ಬರ್ಡ್ ಮ್ಯಾರಥಾನ್”ನ ಎಂಟನೇಯ ಆವೃತ್ತಿಯ ಪಕ್ಷಿ ಸಂಕುಲದ ಸಮೀಕ್ಷೆಯನ್ನು ಕೈಗಾದ ಸುತ್ತಮುತ್ತಲಿನ ವಲಯದಲ್ಲಿ ಜನವರಿ 21 ರಂದು ನಡೆಸಲಾಗುತ್ತದೆ.
ಕಾರ್ಯಕ್ರಮವು ಕೈಗಾ ಅಣುಶಕ್ತಿ ಸ್ಥಾವರದ ವಲಯದಲ್ಲಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿನ ಜೈವಿಕ ವೈವಿದ್ಯತೆಯ ವೈಜ್ಞಾನಿಕ ಅಧ್ಯಯನ, ಆವಾಸಸ್ಥಾನದ ಸುಧಾರಣೆ ಮತ್ತು ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಎನ್ಪಿಸಿಐಎಲ್ ಕಳೆದ ಏಳು ವರ್ಷಗಳಿಂದ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಆಸಕ್ತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನವೆಂಬರ 20 ರೊಳಗೆ ತಮ್ಮ ಇ-ಮೇಲ್ನ್ನು [email protected] ಗೆ ಕಳುಹಿಸಬಹುದು.
Leave a Comment