ಹೊನ್ನಾವರ :
ಕೇಂದ್ರದ ಮೋದಿ ನೇತೃತ್ವದ ಸರಕಾರ ದೇಶದಲ್ಲಿ ನೋಟ ಅಮಾನ್ಯಿಕರಣ ನೀರ್ಣಯ ಕೈಗೊಂಡು ದಿ : 08-11-2017 ರಂದು ಒಂದು ವರುಷ ಪೂರೈಸುತ್ತಿದೆ. ಯಾವುದೇ ಪೂರ್ವಯೊಚಿತ ಕ್ರಮಕೈಗೊಳ್ಳದೇ ದಿನಬೆಳಗಾಗುವುದರೊಳಗೆ ಏಕಾಏಕಿ ಕೇಂದ್ರ ಸರಕಾರ ನೀರ್ಣಯ ಕೈಗೊಂಡಿದ್ದರಿಂದ ದೇಶದ ಸಾಮಾನ್ಯ ಜನ ಪರಿತಪ್ಪಿಸುವಂತಾಗಿದೆ. ಮತ್ತು ದೇಶದ ಪ್ರಗತಿ ಕುಂಠಿತಗೊಂಡಿದ್ದು, ದೇಶದ ಆರ್ಥಿಕ ಪರಿಸ್ಥಿತಿ ಅದೋಗತಿಗೆ ಬಂದು ನಿಂತಿದೆ. ಕಾರಣ ದಿÀ : 08-11-2017 ಬುಧವಾರ ಕಾಂಗ್ರೇಸ್ ಪಕ್ಷ ಕರಾಳದಿನ ಆಚರಿಸುತ್ತಿದ್ದು, ಅಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮುಂಜಾನೆ 11 ಗಂಟೆಗೆ ಭಟ್ಕಳ ಸರ್ಕಲ್ ಬಳಿ ಜಮಾಯಿಸಿ ಕೇಂದ್ರದ ಸರಕಾರದ ನಿಲುವನ್ನು ಪ್ರತಿಭಟಿಸಿ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಪ್ರತಿಭಟನಾ ಮನವಿ ಸಲ್ಲಿಸಲಾಗುವುದು. ಪ್ರತಿಭಟನೆಯಲ್ಲಿ ಶಾಸಕಿ ಶಾರದಾ ಶೆಟ್ಟಿ, ಪಕ್ಷದ ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ, ಗ್ರಾಮ ಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ವಿವಿಧ ಸೆಲ್‍ಗಳ ಅಧ್ಯಕ್ಷರು, ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಬೂತ ಮತ್ತು, ಗ್ರಾಮೀಣ ಘಟಕಗಳ ಅಧ್ಯಕ್ಷರು, ಪಕ್ಷದ ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಪ್ರಕಟಣಿಯಲ್ಲಿ ತಿಳಿಸಿದ್ದಾರೆ
Leave a Comment