ಕಾರವಾರ: ಕಳೆದ ಐದು ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದ್ದ 138 ಟನ್ ಭಾರದ ರೈಲ್ವೇ ಇಂಜಿನ್ನನ್ನು ಬಾರ್ಜ ಮೂಲಕ ಬಂದರಿಗೆ ಸಾಗಿಸಿ ಅಲ್ಲಿಂದ ಗೋವಾಗೆ ಸಾಗಿಸಲಾಯಿತು.
ಜೂನ್ 15ರಂದು ಬೆಂಗಳೂರಿನಿಂದ ಇನ್ಲ್ಯಾಂಡ್ ಟ್ರಾನ್ಸಪೋರ್ಟ ಎಂಬ ಕಂಪನಿಯೂ ಈ ರೈಲ್ವೇ ಇಂಜಿನ್ನ್ನು ರಸ್ತೆ ಮಾರ್ಗದ ಮೂಲಕ ಗೋವಾಗೆ ಸಾಗಿಸಲು ಪ್ರಯತ್ನಿಸಿತ್ತು. ಆದರೆ, ಅತಿ ಬಾರದ ಇಂಜಿನ್ ಸಾಗಿಸಲು ಗೋವಾ ಸರ್ಕಾರ ಪರವಾನಿಗೆ ನೀಡಿರಲಿಲ್ಲ. ಬಾರದ ಇಂಜಿನ್ ಬಂದರೆ ಸೇತುವೆಗೆ ದಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಗೋವಾದ ರಸ್ತೆ ಮಾರ್ಗದ ಮೂಲಕ ರೈಲ್ವೇ ಇಂಜಿನ್ ಸಾಗಾಟಕ್ಕೆ ತಡೆ ಬಿದ್ದಿತು. ಇದರಿಂದ ಕಾರವಾರದಲ್ಲಿಯೇ ಇಂಜಿನ್ ಬೀಡು ಬಿಡಬೇಕಾಯಿತು. ಗೋವಾ ಗಡಿವರೆಗೆ ತೆರಳಿದ್ದ ಇದನ್ನು ಹಿಂತಿರುಗಿ ಕಾರವಾರ ನಗರಕ್ಕೆ ತಂದಿರಿಸಲಾಗಿತ್ತು. ಇದೀಗ ಸಮುದ್ರ ಮಾರ್ಗವಾಗಿ ರೈಲ್ವೇ ಇಂಜಿನ್ ಸಾಗಾಟ ಮಾಡಲು ನಿರ್ಧರಿಸಲಾಯಿತು. ಅದರಂತೆ ಮಂಗಳವಾರ ಸಂಜೆ ಬಂದರಿನ ಮೂಲಕ ವಾಸ್ಕೋಗೆ ಇಂಜಿನ್ ರವಾನಿಸಲಾಯಿತು. ಭಾರದ ಇಂಜಿನ್ ಎತ್ತಲು ಮುಂಬೈನ್ ಬರ್ಕಾತ್ ಹೈರಿಂಗ್ ಕಂಪನಿ ದೊಡ್ಡ ಬಾರ್ಜ ತರಿಸಿತ್ತು. 700 ಟನ್ ಭಾರ ಎತ್ತುವ ಬಾರ್ಜ ಬಂದರಿನಲ್ಲಿ ರೈಲ್ವೇ ಇಂಜಿನ್ನ್ನು ಸ್ಥಳಾಂತರಿಸಿತು. ಬಂದರು ಅಧಿಕಾರಿ
Leave a Comment