ಕಾರವಾರ: ಯೋಜನಾ ಉದ್ಯೋಗ ವಿನಿಮಯ ಕಾರ್ಯಲಯದಿಂದ ಸ್ಟಡೀ ಸರ್ಕಲ್ ಯೋಜನೆಯಡಿಯಲ್ಲಿ ಎಸ್.ಡಿ.ಎ ಮತ್ತು ಎಫ್.ಡಿ.ಎ ಪರೀಕ್ಷಾ ಪೂರ್ವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನವೆಂಬರ 15 ರಿಂದ 23 ರ ವರೆಗೆ ಪ್ರತಿದಿನ ಬೆಳ್ಳಗೆ 10 ರಿಂದ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯ ವರೆಗೆ ತರಗತಿಗಳು ನಡೆಯಲಿವೆ. ಅರ್ಹ ಅಭ್ಯರ್ಥಿಗಳು ತಮ್ಮ ಹೆಸರನ್ನು ಯೋಜನಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಮೂದಿಸಿಕೊಳ್ಳಲು ತಿಳಿಸಲಾಗಿದೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ 9481274298 ನ್ನು ಸಂಪರ್ಕಿಸಬಹುದು ಎಂದು ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment