ಹೊನ್ನಾವರ: ತಾಲೂಕು ಕಾನೂನು ಸೇವಾ ಸಮಿತಿಯಡಿಯಲ್ಲಿ ಜನಸಾಮಾನ್ಯರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ, ವೃದ್ಧರಿಗೆ ಹಾಗೂ ಪರಿಶಿಷ್ಟ ಜಾತಿ ಜನಾಂಗದವರಿಗೆ ಉಚಿತ ಕಾನೂನು ನೆರವು ಸೌಲಭ್ಯಗಳನ್ನು ಒದಗಿಸುತ್ತಿದ್ದು, ಜನತೆ ಅವುಗ¼ನ್ನು ಬಳಸಿಕೊಳ್ಳಬೇಕು ಎಂದು ಹೊನ್ನಾವರ ಹಿರಿಯ ಸಿವಿಲ್ ಜಜ್ಜ್ ನ್ಯಾಯಾಧೀಶ ಎಂ.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ತಾಲೂಕಿನಲ್ಲಿ ನಡೆಯುತ್ತಿರುವ 5ನೇ ದಿನದ ಪ್ರಚಾರ ಆಂದೋಲನವನ್ನು ಸರ್ಕಾರಿ ಆಸ್ಪತ್ರೆ ಹೊನ್ನಾವರದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮನುಷ್ಯನ ಬದುಕಿಗೆ ಆರೋಗ್ಯ ಎಷ್ಟು ಅವಶ್ಯವೋ, ಕಾನೂನು ಅರಿವು ಕೂಡ ಅಷ್ಟೇ ಮುಖ್ಯ. ಸರ್ಕಾರವು ಮನೆ ಮನೆಗೆ ಮುಟ್ಟಿಸಲು ಉದ್ದೇಶಿಸಿರುವ ಕಾನೂನು ಅರಿವಿನ ಕಾರ್ಯಕ್ರಮದ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕಾ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ, ಜನತೆ ಕಾನೂನು ಅರಿತುಕೊಳ್ಳುವುದರಿಂದ ಬದುಕು ಸುಂದರವಾಗುತ್ತದೆ. ಶೋಷಣೆ ಒಳಗಾಗುವುದು ತಪ್ಪುತ್ತದೆ ಎಂದರು.
ವೇದಿಕೆಯಲ್ಲಿ ನ್ಯಾಯಾಧೀಶರಾದ ಮಧುಕರ ಭಾಗ್ವತ ಕೆ. ಹಾಗೂ ನ್ಯಾಯಾಧೀಶೆ ಸನ್ಮತಿ ಎಸ್.ಆರ್., ಸರ್ಕಾರಿ ಅಭಿಯೋಜಕ ಭದರಿನಾಥ ನಾಯರಿ, ವಕೀಲರ ಸಂಘದ ಕಾರ್ಯದರ್ಶಿ ಸೂರಜ್ ನಾಯ್ಕ, ಉಪಸ್ಥಿತರಿದ್ದರು.
ವಕೀಲರಾದ ಉಮಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
Leave a Comment