ಕಾರವಾರ:
ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಬೈತಖೋಲ್ದಲ್ಲಿ ನಡೆದಿದೆ.
ಅವರ್ಸಾದ ಸಂದೇಶ ಗುನಗಾ (21) ಮೃತರು. ಕಾರವಾರಕ್ಕೆ ತೆರಳುತ್ತಿದ್ದ ವೇಳೆ ಬೈತಖೋಲ್ ಬಳಿ ವಾಹನವೊಂದು ಡಿಕ್ಕಿಯಾಗಿದೆ. ಈ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ವಾಹನದ ಗುರುತು ಸಿಕ್ಕಿಲ್ಲ. ಶೋಧ ಕಾರ್ಯ ನಡೆಸುತ್ತಿರುವದಾಗಿ ಸಂಚಾರ ಠಾಣೆ ಪಿಸೈ ಎನ್.ಡಿ ಬಿಕ್ಕಣ್ಣನವರ್ ತಿಳಿಸಿದರು. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment