ಕಾರವಾರ:
ಮಾಜಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾ.ಪಂ.ನ ಬಹುತೇಕ ಸದಸ್ಯರು ಗೈರಾಗಿದ್ದು, ಈ ಹಿಂದೆ ರಾಜೀನಾಮೆ ನೀಡಿದ ಶೀತಲ ಪವಾರ ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅ.11 ರಂದು ವೈಯಕ್ತಿಕ ಕಾರಣ ಹೇಳಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಶೀತಲ ಪವಾರ್ ರಾಜೀನಾಮೆ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿ ನ. 2ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದು ರಾಜೀನಾಮೆ ಅಂಗೀಕರಿಸಲು ಸೂಚಿಸಿದ್ದರು. ಬಳಿಕ ಸುಮಾರು ಒಂದು ತಿಂಗಳು ಕಾಲ ಅಧ್ಯಕ್ಷರಿಲ್ಲದೆ ಉಪಾಧ್ಯಕ್ಷರ ಉಸ್ತುವಾರಿಯಲ್ಲಿ ಗ್ರಾ.ಪಂ. ಸಭೆ ಸಮಾರಂಭಗಳನ್ನು ನಡೆಸಲಾಗಿತ್ತು. ಆಯ್ಕೆ ಪ್ರಕ್ರಿಯೇಗೆ ಜನರಿಂದ ವಿರೋಧ ವ್ಯಕ್ತವಾಗುವ ಬಗ್ಗೆ ಕೇಳಿ ಬಂದಿತಾದರೂ ಯಾವುದೇ ಗೊಂದಲಗಳು ನಡೆಯದೆ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಮಿಸಲಾತಿ ಪ್ರಕಾರ ಬ ವರ್ಗದ ಮಹಿಳೆಗೆ ಮಾತ್ರ ಅವಕಾಶವಿದ್ದು, ಅದರಂತೆ ಪಂಚಾಯಿತಿಗೆ ಆಯ್ಕೆಯಾದವರಲ್ಲಿ ಶೀತಲ ಪವಾರ್ ಮಾತ್ರ ಇರುವುದು ಅವರಿಗೆ ಎದುರಾಳಿಯೇ ಇಲ್ಲದಂತಾಗಿತ್ತು. ಇದರಿಂದ ಸಭೆಗೆ ಬಹುತೇಕ ಸದಸ್ಯರು ಗೈರಾದರು ಇರುವ ಮಿಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದ್ದ ಶೀತಲ್ ಪವಾರ ಮತ್ತೊಮ್ಮೆ ಅಧ್ಯಕ್ಷೆಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಕೇವಲ ಮೂರು ಜನ ಸದಸ್ಯರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
Leave a Comment