ಕಾರವಾರ: ಪ್ರತಿಯೊಬ್ಬ ಎಲ್ಐಸಿ ಪ್ರತಿನಿಧಿಯು ಸಂಸ್ಥೆಯ ಅವಿಭಾಜ್ಯ ಅಂಗವಾಗಿದ್ದು,ಪ್ರತಿನಿಧಿಗಳು ಸಕ್ರೀಯವಾಗಿ ಕಾರ್ಯ ನಿರ್ವಹಿಸುವುದರ ಮೂಲಕ ಸಂಸ್ಥೆಯಿಂದ ಸಿಗುವ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಎಲ್ಐಸಿಯ ಸ್ಥಳೀಯ ಶಾಖಾ ಪ್ರಬಂಧಕಿ ರುಕ್ಮಿಣಿ ಹೇಳಿದರು.
ಅವರು ಇಲ್ಲಿನ ಮುರಳೀಧರ್ ಮಠದ ಸಭಾಂಗಣದಲ್ಲಿ ಎಲ್ಐಸಿ ಪ್ರತಿನಿಗಳ ಸಂಘ(ಲೀಯಾಫ್)ದ ವಾರ್ಷಿಕ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಕಳೆದ 60 ವರ್ಷಗಳಿಂದ ಎಲ್ಐಸಿ ಸಾರ್ವಜನಿಕರಿಗೆ ಅತ್ತುತ್ತಮ ಸೇವೆ ನೀಡುವುದರ ಮೂಲಕ ಮುಂಚೂಣಿಯಲ್ಲಿದೆ. ಕಳೆದ 17 ವರ್ಷಗಳಿಂದ ಒಳ್ಳೆಯ ಪಾಲಸಿ ನೀಡುವುದರ ಮುಖಾಂತರ ಶೇ.78 ರಷ್ಟು ವಿಮಾ ಕ್ಷೇತ್ರದ ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಸಿದೆ. ಸ್ಥಳೀಯ ಶಾಖೆಯಲ್ಲಿ 304 ಪ್ರತಿನಿಗಳು ಕಾರ್ಯ ನಿರ್ವಹಿಸುತ್ತಿದ್ದುಎಲ್ಐಸಿಯ ಜನಪ್ರೀಯ ಪಾಲಸಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಭರವಸೆ ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ಭದ್ರತೆಯ ಆಶಾ ಕಿರಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಸಾಮಾಜಿಕ ಕಲ್ಯಾಣದ ಸದುದ್ದೇಶದಿಂದ ಕ್ಯಾನ್ಸರ್ ರೋಗಿಗಳಿಗೂ ಪಾಲಸಿ ನೀಡುವ ಯೋಜನೆ ಜಾರಿಗೆ ತಂದಿದೆ. ಜೀವನ್ ಅಕ್ಷಯ್ ಪಾಲಸಿಯಿಂದ ಬಡವರಿಗೆ ಅನುಕೂಲವಾಗಲಿದೆ. ಇಂತಹ ಪಾಲಸಿಗಳನ್ನು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಿಸಬೇಕಾದ ಜವಾಬ್ದಾರಿ ಪ್ರತಿನಿಧಿಗಳ ಮೇಲಿದೆ. ಇನ್ನಷ್ಟು ಪರಿಶ್ರಮದಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ, ಸಿಎಂ,ಡಿಎಂ,ಝಡ್ಎಂ ಕ್ಲಬ್ಗಳ ಸದಸ್ಯರಾಗಿ ಅತ್ಯುತ್ತಮ ಸೌಲಭ್ಯದ ಜೊತೆಗೆ ಕೈ ತುಂಬ ಆದಾಯ ಗಳಿಸಲು ಪ್ರತಿನಿಗಳಿಗೆ ಇಲ್ಲಿ ಸಾಕಷ್ಟು ಅವಕಾಶ ಇದೆ.ಇದರ ಜತೆಗೆ ಇಂತಹ ಸಂಘದೊಂದಿಗೆ ಕೈ ಜೋಡಿಸಿದರೆ ವೈಯಕ್ತಿಕ ಅಥವಾ ಪಾಲಸಿದಾರರ ಸಮಸ್ಯೆ ಪರಿಹರಿಸಿಕೊಂಡು ಸಾಮಾಜಿಕವಾಗಿ ಗುರುತಿಸಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಪ್ರತಿನಿಗಳು ಎಲ್ಐಸಿ ಹಾಗೂ ಲೀಯಾಫ್ ಜತೆಗೆ ಉತ್ತಮ ಸಂಬಂಧ ಇಟ್ಟುಕೊಂಡು ಉತ್ತಮ ಬಾಂಧ್ಯದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವಂತಾಗಲಿ ಎಂದು ಹೇಳಿದರು.
ಮುಖ್ಯ ಅತಿಥಿ ಲೀಯಾಫ್ನ ಧಾರವಾಡ ವಿಭಾಗದ ಅಧ್ಯಕ್ಷ ಸುಭಾಸ್ಚಂದ್ರ ಶೆಟ್ಟಿ ಮಾತನಾಡಿ, ಎಲ್ಐಸಿ ಪ್ರತಿನಿಗಳು ಸಂಸ್ಥೆಯಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳದಂತೆ ಲೀಯಾಫ್ ಕಳೆದ 53 ವರ್ಷಗಳಿಂದ ಹೋರಾಡುತ್ತಲೇ ಬಂದಿದೆ. ಪ್ರತಿನಿಗಳಿಗೆ ಅನ್ಯಾಯವಾಗದಂತೆ ಅವರಿಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಎಲ್ಐಸಿಯ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದೆ. ಆದ್ದರಿಂದ ಪ್ರತಿನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲೀಯಾಫ್ನ ಸದಸ್ಯರಾಗಿ, ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಲೀಯಾಫ್ನ ಧಾರವಾಡ ವಿಭಾಗದ ಕಾರ್ಯದರ್ಶಿ ಎನ್.ಬಿ.ಹಿರೇಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಎಸ್.ಭಟ್ಟ ಪ್ರಾರ್ಥನೆ ಗೀತೆ ಹಾಡಿದರು. ಲೀಯಾಫ್ನ ಕಾರವಾರ ಘಟಕದ ನೂತನ ಪದಾಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ನೂತನ ಅಧ್ಯಕ್ಷರಾಗಿ ಇನ್ನಾಸ್ ಫರ್ನಾಂಡೀಸ್, ಗೌರವ ಅಧ್ಯಕ್ಷರಾಗಿ ನಂದಾ ಗುನಗಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕುಡಾಳಕರ, ಉಪಾಧ್ಯಕ್ಷರಾಗಿ ಮಾಧವ್ ನಾಯ್ಕ,ಮಂಜುನಾಥ್ ಪೆಡ್ನೇಕರ, ಸಹಕಾರ್ಯದರ್ಶಿಯಾಗಿ ಸಂಗೀತಾ ಸಾತ್ರೇಕರ, ಖಜಾಂಜಿಯಾಗಿ ಶಾನಭಾಗ್ ಆಯ್ಕೆಯಾದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಕೆ.ಟಿ.ಬೂತೆ,ಕಾರ್ಯದರ್ಶಿ ಸಂಜಯ ಬೋರ್ಕರ್ ಮುಂತಾದವರು ಉಪಸ್ಥಿತರಿದ್ದರು.
Leave a Comment