ಕಾರವಾರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸ್ತಕ ಸಾಲಿನ ಶಿಷ್ಯವೇತನಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಡಿಸೆಂಬರ 15 ಕೊನೆಯ ದಿನವಾಗಿರುತ್ತದೆ. ಶಾಸ್ತ್ರೀಯ ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ನೃತ್ಯ ಸುಗಮ ಸಂಗೀತ, ಕಥಾ ಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ 16 ರಿಂದ 24 ವರ್ಷ ವಯೋಮಾನದ ಒಳಗಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿಗಳನ್ನು ಅಕಾಡೆಮಿಯ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿರುತ್ತದೆ. ಬೇರೆ ಬೇರೆ ಜಿಲ್ಲೆಯ ಅಭ್ಯರ್ಥಿಗಳು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದಾಗಿರುತ್ತದೆ. ಅರ್ಜಿ ಮತ್ತು ಪಠ್ಯಕ್ರಮ ಪಡೆಯಲಿಚ್ಚಿಸುವರು 10 ರೂಪಾಯಿಯ ಸ್ಟಾಂಪ್ ಹಚ್ಚಿದ ಸ್ವ ವಿಳಾಸವುಳ್ಳ ಲಕೋಟೆಯನ್ನು ರಿಜೀಸ್ಟಾರ್ ಕರ್ನಾಟಕ ಸಂಗೀತ ನತ್ಯ ಅಕಾಡೆಮಿ ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ ಬೆಂಗಳೂರು 560002 ಇಲ್ಲಿಗೆ ಕಳುಹಿಸುವಂತೆ ಅಕಾಡೆಮಿ ರಿಜಿಸ್ಟಾರ ಬನಶಂಕರಿ ವಿ. ಅಂಗಡಿ ಕೋರಿದ್ದಾರೆ.
Leave a Comment