ಹೊನ್ನಾವರ. ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ಆರ್.ಎನ್.ನಾಯ್ಕರು ಚಲಾವಣೆಯಲ್ಲಿಲ್ಲದ ನಾಣ್ಯವೆಂದು ಹೇಳಿಕೆ ನೀಡಿರುವುದು ಖಂಡನೀಯ. ಇವರು ಯಾವ ಮಾನದಂಡದಡಿಯಲ್ಲಿ ನಿರ್ಧರಿಸದ್ದಾರೆಂದು ವ್ಯಾಖ್ಯಾನಿಸಬೇಕು. ಚುನಾವಣೆಯಲ್ಲಿ ಸೋತರೆ ಅಥವಾ ಚುನಾವಣೆಯಿಂದ ದೂರ ಉಳಿದ ಮಾತ್ರಕ್ಕೆ ಚಲಾವಣೆಯಲ್ಲಿರದ ನಾಣ್ಯವೆಂದು ಅರ್ಥೈಸಿದ್ದರೆ ಅದು ಅವರ ಅನುಭವದ ಕೊರತೆಯೆಂದೇ ಹೇಳಬೇಕಾಗುತ್ತದೆ. ಚುನಾವಣೆಯಲ್ಲಿ ಜ್ಞಾನಪೀಠ ಪ್ರಶಸ್ತೀ ಪುರಸ್ಕøತ ಡಾ|| ಶಿವರಾಮ ಕಾರಂತರು, ನೇತ್ರ ತಜ್ಞ ಡಾ|| ಮೋದಿಯವರು ಸಹ ಅಂದೊಂದು ಕಾಲದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಅಂದರೆ ಇವರೆಲ್ಲರು ಚಲಾವಣೆಯಲ್ಲಿ ಇರದ ನಾಣ್ಯಗಳೇ? ವ್ಯಕ್ತಿ ಬೇರೆ ವ್ಯಕ್ತಿತವ್ವೇ ಬೇರೆ ಚುನಾವಣೆಯಲ್ಲಿ ಗೆದ್ದವರೆಲ್ಲರು ಜನಪ್ರಿಯರಾಗಬಹುದು. ಆದರೆ ನೈತಿಕ ಮೌಲ್ಯವುಳ್ಳವರೆಂದು ಹೇಳಲಾಗದು. ಆದ್ದರಿಂದ ಜನಪ್ರೀಯರಾದವರೆಲ್ಲರು ಮೌಲ್ಯವುಳ್ಳವರೆಂದು, ಮೌಲ್ಯವುಳ್ಳವರೆಲ್ಲರು ಜನಪ್ರಿಯರೆಂದು ಪರಿಗಣಿಸಲು ಅಸಾಧ್ಯ. ಅದರಂತೆ ಮಾಜಿ ಸಚಿವ ಆರ್.ಎನ್. ನಾಯ್ಕರು ಆದರ್ಶ ಶಾಸಕರಾಗಿ ಶಾಸನ ಸಭೆಯಲ್ಲಿ ಹೆಸರು ಮಾಡಿದ್ದಾರೆ. ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಕಪ್ಪು ಚುಕ್ಕೆಯನ್ನು ಹೊಂದಿರದ ಜನನಾಯಕರಾಗಿ ಇಂದಿಗೂ ಉಳಿದುಕೊಂಡಿದ್ದಾರೆ. ಹೊನ್ನಾವರ. ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ಆರ್.ಎನ್.ನಾಯ್ಕರು ಚಲಾವಣೆಯಲ್ಲಿಲ್ಲದ ನಾಣ್ಯವೆಂದು ಹೇಳಿಕೆ ನೀಡಿರುವುದು ಖಂಡನೀಯ. ಇವರು ಯಾವ ಮಾನದಂಡದಡಿಯಲ್ಲಿ ನಿರ್ಧರಿಸದ್ದಾರೆಂದು ವ್ಯಾಖ್ಯಾನಿಸಬೇಕು. ಚುನಾವಣೆಯಲ್ಲಿ ಸೋತರೆ ಅಥವಾ ಚುನಾವಣೆಯಿಂದ ದೂರ ಉಳಿದ ಮಾತ್ರಕ್ಕೆ ಚಲಾವಣೆಯಲ್ಲಿರದ ನಾಣ್ಯವೆಂದು ಅರ್ಥೈಸಿದ್ದರೆ ಅದು ಅವರ ಅನುಭವದ ಕೊರತೆಯೆಂದೇ ಹೇಳಬೇಕಾಗುತ್ತದೆ. ಚುನಾವಣೆಯಲ್ಲಿ ಜ್ಞಾನಪೀಠ ಪ್ರಶಸ್ತೀ ಪುರಸ್ಕøತ ಡಾ|| ಶಿವರಾಮ ಕಾರಂತರು, ನೇತ್ರ ತಜ್ಞ ಡಾ|| ಮೋದಿಯವರು ಸಹ ಅಂದೊಂದು ಕಾಲದಲ್ಲಿ ಚುನಾವಣೆಯಲ್ಲಿ ಸೋತಿದ್ದಾರೆ. ಅಂದರೆ ಇವರೆಲ್ಲರು ಚಲಾವಣೆಯಲ್ಲಿ ಇರದ ನಾಣ್ಯಗಳೇ? ವ್ಯಕ್ತಿ ಬೇರೆ ವ್ಯಕ್ತಿತವ್ವೇ ಬೇರೆ ಚುನಾವಣೆಯಲ್ಲಿ ಗೆದ್ದವರೆಲ್ಲರು ಜನಪ್ರಿಯರಾಗಬಹುದು. ಆದರೆ ನೈತಿಕ ಮೌಲ್ಯವುಳ್ಳವರೆಂದು ಹೇಳಲಾಗದು. ಆದ್ದರಿಂದ ಜನಪ್ರೀಯರಾದವರೆಲ್ಲರು ಮೌಲ್ಯವುಳ್ಳವರೆಂದು, ಮೌಲ್ಯವುಳ್ಳವರೆಲ್ಲರು ಜನಪ್ರಿಯರೆಂದು ಪರಿಗಣಿಸಲು ಅಸಾಧ್ಯ. ಅದರಂತೆ ಮಾಜಿ ಸಚಿವ ಆರ್.ಎನ್. ನಾಯ್ಕರು ಆದರ್ಶ ಶಾಸಕರಾಗಿ ಶಾಸನ ಸಭೆಯಲ್ಲಿ ಹೆಸರು ಮಾಡಿದ್ದಾರೆ. ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಕಪ್ಪು ಚುಕ್ಕೆಯನ್ನು ಹೊಂದಿರದ ಜನನಾಯಕರಾಗಿ ಇಂದಿಗೂ ಉಳಿದುಕೊಂಡಿದ್ದಾರೆ. ಹೇಳಿಕೆ ನಿಡಿರುವ ಬಿಜೆಪಿ ಮುಖಂಡರಿಗೆ ಭಟ್ಕಳ ರಾಜಕೀಯ ಇತಿಹಾಸದ ಸಂಪೂರ್u ಅರಿವು ಇಲ್ಲವೆಂಬುವುದು ಸತ್ಯ. ಯಾಕೆಂದರೆ ಆರ್.ಎನ್. ನಾಯ್ಕರ ಅಧಿಕಾರ ಅವಧಿಯ ನಂತರ ಮಾನ್ಯ ಡಾ|| ಚಿತ್ತರಂಜನ್‍ರವರು ಶಾಸಕರಾಗಿ 2 ವರ್ಷಗಳ ಕಾಲ ಅಧಿಕಾರ ನಡೆಸಿದ ನಂತರವೇ ಚಿತ್ತರಂಜನರವರ ಹತ್ಯೆ ನಡೆದಿದೆ ಎಂಬುದನ್ನು ತಿಳಿದುಕೊಳ್ಳಲಿ. ಈ ಹಿಂದೆ ರಾಜ್ಯದಲ್ಲಿ 5 ವರ್ಷಗಳ ಕಾಲ ಬಿಜೆಪಿ ಆಡಳಿತ ನಡೆಸಿದೆ. ಈಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಭಟ್ಕಳ ಗಲಭೆ ಮತ್ತು ಡಾ|| ಚಿತ್ತರಂಜನರವರ ಹತ್ಯೆಯ ತನಿಖಾ ಆಯೋಗದ ವರದಿಯನ್ನು ಯಾಕೆ ಲೋಕಾರ್ಪಣೆಗೊಳಿಸಲಿಲ್ಲ. ಆದ್ದರಿಂದ ಬಿಜೆಪಿ ಮುಖಂಡರು ಈ ವರದಿಯನ್ನು ಜನತೆಯ ಮುಂದಿಡುವಲ್ಲಿ ಹೋರಾಟ ನಡೆಸಲಿ, ಚಿತ್ತರಂಜನರವರ ಆತ್ಮಕ್ಕೆ ಶಾಂತಿ ನೀಡಲಿ, ಜನತೆಯ ಭರವಸೆ ಉಳಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ನೈಜ ಸಂಗತಿಗಳನ್ನು ಹೊರಹಾಕುವವರನ್ನು ಹತ್ತಿಕ್ಕುವ ರಾಜಕೀಯ ವ್ಯವಸ್ಥೆ ವಿಷಾಧನೀಯ. ಯಾವದೇ ರಾಜಕೀಯ ಪಕ್ಷದ ಜನನಾಯಕರು ಮಾಡಿದ ತಪ್ಪುಗಳನ್ನು ಲೋಕದ ಮುಖಕ್ಕೆ ಪರಿಚಯಿಸಿದಾಗ ಅದನ್ನು ಆರೋಗ್ಯಕರವಾಗಿ ಸ್ವೀಕರಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ದಿ|| ಡಿ.ದೇವರಾಜು ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ಎಮ್.ಡಿ. ಗೌಡ ಆರೋಳ್ಳಿ, ಎಮ್. ಜಿ. ನಾಯ್ಕ ನಗರೆ, ಪಾಂಡುರಂಗ ಬಾಗಿಲವೈದ್ಯ ಅನಿಲಗೋಡ, ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.
Leave a Comment