ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಲ್ಲಿ ಸರ್ಕಾರದ ಅನುಮತಿಯಿಲ್ಲದೇ ಕಾರ್ಯಕ್ರಮ ಆಯೋಜಿಸುವುದು ಮತ್ತು ಬ್ಯಾನರು, ಪತಾಕೆಗಳನ್ನು ಆಳವಡಿಸಲಾಗುತ್ತಿದ್ದಿ ಇದರಿಂದ ಇತ್ತಿಚಿನ ದಿನಗಳಲ್ಲಿ ಕೋಮುಗಲಭೆಯ ಪ್ರಕರಣಗಳು ಕಂಡುಬಂದಿರುತ್ತವೆ. ಇದನ್ನು ತಡೆಯಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ನಾಗರಾಜ ಶೇಟ್ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಯಾವುದೇ ಧರ್ಮದವರು ಧಾರ್ಮಿಕ ಕಾರ್ಯಚರಣೆ ಅಂಗವಾಗಿ ಪಂಚಾಯಿತಿ ನಿಯಮದಂತೆ ಪರವಾನಿಗೆ ಪಡೆದಿರುವುದಿಲ್ಲ. ಸ್ಥಳದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಯಾವ ರೀತಿ ಪರಿಶೀಲನೆ ಮಾಡಿದ್ದಾರೋ ನಮಗೂ ಗೊತ್ತಾಗುತ್ತಿಲ್ಲ ಎಂದು ಸಾರ್ವಜನಿಕರಲ್ಲಿ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಹಾಗೂ ಮುಂಬರುವ ದಿನಗಳಲ್ಲಿ ಯಾವುದೇ ರೀತಿ ಸಾಂಸ್ಕøತಿಕ ಧಾರ್ಮಿಕ ಆಧ್ಯಾತ್ಮಿಕ ಹಾಗೂ ರಾಜಕೀಯದ ಕಾರ್ಯಕ್ರಮವನ್ನು ಮಾಡಬೇಕಾದರೆ ತಾಲೂಕು ಪಂಚಾಯಿತಿಯ ಅನುಮತಿ ಮೇರೆಗೆ ಮುಂಬರುವ ದಿನಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು ಹಾಗೂ ಚಿತ್ರವನ್ನು ಬೆನರ್ ಆಳವಡಿಸುವಲ್ಲಿ ಈ ನಿಯಮ ಅನ್ವಯಿಸಬೇಕು ಎಂದು ಅವರು ತಿಳಿಸಿದ್ದಾರೆ.
ಹೊನ್ನಾವರ ತಾಲೂಕು ಪಂಚಾಯಿತಿನ ಅಧ್ಯಕ್ಷರಿಗೆ ವಿಚಾರಿಸಲಾಗಿ ಈ ಕೊಮುಗಲಭೆಯ ಬಗ್ಗೆ ಮಾಹಿತಿಯೇ ಇಲ್ಲವೆಂದೂ ಉಡಾಪೆ ಹೇಳಿಕೆ ಕೊಟ್ಟು ಒಪ್ಪಿಕೊಂಡಿರುತ್ತಾನೆ. ಮುಂಬರುವ ದಿನಗಳಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸಿದ್ದೇ ಆದಲ್ಲಿ ಅದಕ್ಕೆ ನೇರವಾಗಿ ಅಧಿಕಾರಿ ವರ್ಗದವರು ಕಾರಣರಾಗಿದ್ದಾರೆ. ಚಂದಾವರ ಸೀಮೆಯ ಅತೀ ಸೂಕ್ಷ್ಮ ಪ್ರದೇಶವಾಗಿದ್ದರಿಂದ ಇಲ್ಲಿನ ವ್ಯವಸ್ಥೆ ಕಟ್ಟುನಿಟ್ಟಾಗಿ ನಿಭಾಯಿಸುವುದು ಹಾಗೂ ಅದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕ ನಾಗರಾಜ ಶೇಟ್, ಗಣಪತಿ ಶೇಟ್, ರಮಕಾಂತ ನಾಯ್ಕ ತಿಳಿಸಿದ್ದಾರೆ.
Leave a Comment