ಹಳಿಯಾಳ: ದಿ.7 ರಂದು ಹಳಿಯಾಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಳಿಯಾಳ ಯುಥ್ ಕಾಂಗ್ರೇಸ್ ಕಮಿಟಿಯವರು ಹಾಗೂ ಬ್ಲಾಕ್ ಕಾಂಗ್ರೇಸ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಸಿ ಕಾರ್ಯಕ್ರಮ ಪ್ರಚಾರ ನಡೆಸಿದರು. ಯುಥ್ ಕಾಂಗ್ರೇಸ್ ಮುಖಂಡ ಹಾಗೂ ಎಪಿಎಮ್ಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೇಕರ ನೇತೃತ್ವದಲ್ಲಿ ಇಲ್ಲಿಯ ಶ್ರೀ ಶಿವಾಜಿ ಕ್ರೀಡಾಂಗಣದಿಂದ ಪ್ರಾರಂಭವಾದ ಬೈಕ್ ರ್ಯಾಲಿಯನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಚಾಲನೆ ನೀಡಿದರು. ಪಟ್ಟಣದಲ್ಲೆಲ್ಲ ಸಂಚರಿಸಿದ ಬೈಕ್ ರ್ಯಾಲಿಯಲ್ಲಿ ನಗರ ಸೇರಿದಂತೆ ಗ್ರಾಮಾಂತರ ಭಾಗದಿಂದ ಸುಮಾರು 400ಕ್ಕೂ ಅಧಿಕ ಬೈಕ್ಗಳೊಂದಿಗೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಬೈಕ್ ರ್ಯಾಲಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ಜಿಪಂ ಸದಸ್ಯ ಕೃಷ್ಣಾ ಪಾಟೀಲ್, ಪುರಸಭೆ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಸದಸ್ಯರಾದ ಶಂಕರ ಬೆಳಗಾಂವಕರ, ಸತ್ಯಜೀತ ಗಿರಿ, ರವಿ ತೊರಣಗಟ್ಟಿ, ಅನಿಲ ಚವ್ವಾಣ, ಯಶವಂತ ಪಟ್ಟೆಕರ, ಸಂಜಯ ಪಾಟಿಲ, ಅಬ್ದುಲ್ ಸಲಾಮ, ಅನಿಲ ಫರ್ನಾಂಡಿಸ್, ರೋಹನ ಬ್ರಗಾಂಜಾ ಮೊದಲಾದವರು ನೇತೃತ್ವ ವಹಿಸಿದ್ದರು.
Leave a Comment