ಕಾರವಾರ:
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸ್ತಕ ಸಾಲಿನ ಗುರುಶಿಷ್ಯ ಪರಂಪರೆ ತರಬೇತಿ ಹಾಗೂ ರಸಗ್ರಹಣ ಶಿಬಿರಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುರುಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಗುರುಗಳು ಡಿಸೆಂಬರ 15 ರೊಳಗಾಗಿ ತಮ್ಮ ಮನವಿ ಪತ್ರದೊಂದಿಗೆ 12 ರಿಂದ 25 ವರ್ಷ ವಯೋಮಿತಿಯೊಳಗಿರುವ ಅಭ್ಯರ್ಥಿಗಳ ಸ್ವ-ವಿವರ, ಜನ್ಮಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಲಗತ್ತಿಸಿ, ರಿಜಿಷ್ಟಾರ್ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ ಬೆಂಗಳೂರು-2 ವಿಳಾಸಕ್ಕೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-22215072 ಸಂಪರ್ಕಿಸಲು ಅಕಾಡೆಮಿ ರಿಜಿಸ್ಟ್ರಾರ ಬನಶಂಕರಿ ವಿ. ಅಂಗಡಿ ಕೋರಿದ್ದಾರೆ.
Leave a Comment