ಹಳಿಯಾಳ: ಗ್ರಾಮಾಂತರ ಭಾಗದ ಗೃಹಿಣಿ ಸೇರಿದಂತೆ ಓರ್ವ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ 2 ಪ್ರತ್ಯೇಕ ಪ್ರಕರಣಗಳು ಹಳಿಯಾಳ ಪೋಲಿಸ್ ಠಾಣೆಯಲ್ಲಿ ದಾಖಲಾಗಿವೆ. ತಾಲೂಕಿನ ಭಾಗವತಿ ಗ್ರಾಮದ ಗೃಹಿಣಿ ಜಯಲಕ್ಷ್ಮೀ ಸುಬ್ರಮಣ್ಯ ನಾಯರ(25) ದಿ.9-12-2017 ರಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರ ನಡೆದವಳು ಈವರೆಗೆ ಮನೆಗೆ ಬಾರದೆ ಸಂಬಂಧಿಕರ ಮನೆಗೂ ತೆರಳದೆ ಎಲ್ಲಿಯೋ ಕಾಣೆಯಾಗಿದ್ದಾಳೆಂದು ಪತಿ ಸುಬ್ರಮಣ್ಯ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ತಾಲೂಕಿನ ಚಿಬ್ಬಲಗೇರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತಿಮ್ಮಾಪೂರ ಗ್ರಾಮದ ರಹವಾಸಿ ವಿದ್ಯಾರ್ಥಿ ಸುಶಾಂತ ಸೋಮನಿಂಗ ದೇವಕಾರಿ(15) ಎನ್ನುವವನು ದಿ.30-11-2017ರಂದು ಬೆಳಿಗ್ಗೆ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೊದವನು ನಾಪತ್ತೆಯಾಗಿದ್ದು ವಿದ್ಯಾರ್ಥಿಗೆ ಯಾರೋ ಆರೋಪಿತರು ಯಾವುದೋ ಆಸೆ ಆಮಿಷ ಒಡ್ಡಿ ಪುಸಲಾಯಿಸಿ, ಯಾವುದೋ ದುಷ್ಕøತ್ಯಕ್ಕಾಗಿ ಅಪಹರಿಸಿಕೊಂಡು ಹೋಗಿದ್ದಾರೆಂದು ಆತನ ತಂದೆ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ. 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪಿಎಸ್ಐ ಹೂಗಾರ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Leave a Comment