ಹಳಿಯಾಳ :- ದಿ.14 ರಂದು ಹೊನ್ನಾವರ ಮಾಗೋಡದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಎನ್ನುವವಳನ್ನು ಎಳೆದಾಡಿ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಳಿಯಾಳ ಘಟಕ ಶುಕ್ರವಾರ ಇಲ್ಲಿಯ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ಮನವಿಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಯನ್ನು ಖಂಡಿಸುವುದಾಗಿ ಹೇಳಿರುವ ಸಂಘಟನೆಯವರು ವಿದ್ಯಾರ್ಥಿನಿಯ ಮೇಲೆ ನಡೆದ ಹಲ್ಲೆಯ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ದುಷ್ಕರ್ಮಿಗಳ ಬಂಧನಕ್ಕೆ ಕ್ರಮ ಜರುಗಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸದೆ ಇದ್ದರೇ ಊಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಸಂದರ್ಭದಲ್ಲಿ ಪರಿಷತ್ನ ತಾಲೂಕಾ ಸಂಚಾಲಕ ಸಾಗರ ಕಾಜಗಾರ, ಅಪ್ಪಾಸಾಹೇಬ ಹುಂಡೇಕರ, ನಿತ್ಯಾನಂದ ಗೌಡರ, ಅಕ್ಷಯ ಬಾಳೆಕುಂದ್ರಿ, ಪ್ರವೀಣ, ನಾರಾಯಣ, ಪ್ರಜ್ವಲ, ರೋಹನ ಇತರರು ಇದ್ದರು.
Leave a Comment