ಕಾರವಾರ: ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತ ಚುನಾವಣೆಯಲ್ಲಿ ಸಹಭಾಗಿತ್ವ ಕಾರ್ಯಕ್ರಮದ ಅಂಗವಾಗಿ 14 ರಿಂದ 18 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಡಿ.18 ರಂದು ಬೆಳಗ್ಗೆ 11 ಗಂಟೆಗೆ ಹಿಂದೂ ಹೈಸ್ಕೂಲ್ ಸಭಾಂಗಣದಲ್ಲಿ ತಾಲೂಕ ಮಟ್ಟದ ಚುನಾವಣಾ ವಿಷಯಕ್ಕೆ ಸÀಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ವಿದ್ಯಾರ್ಥಿಗಳು ಕಾರವಾರ ತಾಲೂಕಿನ ಪದವಿ ಪೂರ್ವ ನೂಡಲ್ ಕಾಲೇಜಿನ ಪ್ರಾಚಾರ್ಯರನ್ನು ಸಂಪರ್ಕಿಸಬಹುದಾಗಿದೆ. ಪ್ರತಿ ತಲಾ ಒಂದು ತಂಡದಿಂದ 2 ವಿದ್ಯಾರ್ಥಿಗಳಿಗೆ ಅವಕಾಶವಿದ್ದು ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಂದ 3 ತಂಡಗಳು ಭಾಗವಹಿಸಬಹುದಾಗಿದೆ. ತಾಲೂಕ ಮಟ್ಟದಲ್ಲಿ ವಿಜೇತರಾದವರನ್ನು ಡಿಸೆಂಬರ 19 ರಂದು ಬೆಳಗ್ಗೆ 11 ಕ್ಕೆ ಕಾರವಾರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಗೆ ಅರ್ಹರಾಗಿರುತ್ತಾರೆ.
ಆಸಕ್ತ ವಿಧ್ಯಾರ್ಥಿಗಳನ್ನು ಪ್ರೌಢಶಾಲಾ ಮುಖ್ಯಾಪಾಧ್ಯಾರು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ತಮ್ಮ ತಂಡಗಳನ್ನು ಸ್ಪರ್ಧೆಗೆ ಕಳುಹಿಸಿ ಕೊಡಬೇಕೆಂದು ತಹಶೀಲ್ದಾರ ಜಿ. ಎನ್. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment