ಹಳಿಯಾಳ : ಹಿಂದೂ ಸಂಘಟನೆಗಳು ಶನಿವಾರ ಹಳಿಯಾಳ ಬಂದ್‍ಗಾಗಿ ನೀಡಿದ ಕರೆಯನ್ನು ಪಟ್ಟಣದಲ್ಲಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದ್ದರಿಂದ ಶುಕ್ರವಾರ ರಾತ್ರಿ ಸಂಘಟನೆಯವರು ಬಂದ್ ಕರೆ ಹಿಂದೆ ಪಡೆದಿದ್ದರು. ಶನಿವಾರ ಹಳಿಯಾಳದಲ್ಲಿ ಬಂದ್ ಆಚರಣೆ ಮಾಡಲಾಗಿಲ್ಲ. ತಹಶೀಲ್ದಾರ್ ಹಾಗೂ ಪೋಲಿಸ್ ಅಧಿಕಾರಿಗಳ ಸಮಕ್ಷಮ ಬಿಜೆಪಿಯ ಮುಖಂಡರೊಬ್ಬರು ಶುಕ್ರವಾರ ರಾತ್ರಿ ಬಂದ್‍ಅನ್ನು ಹಿಂದೆ ಪಡೆಯಲು ಒಪ್ಪಿದ್ದ ಮಾಹಿತಿ ಪಟ್ಟಣದಲ್ಲಿ ಕೆಲವು ಅಂಗಡಿಕಾರರಿಗೆ ತೀರ ತಡವಾಗಿ ತಿಳಿದಿದ್ದ ಕಾರಣ ಅವರಲ್ಲಿಯ ಕೆಲವೆ ಕೆಲವರು ಶನಿವಾರ ಇಲ್ಲಿಯ ಮುಖ್ಯ ಬೀದಿಯಲ್ಲಿಯ ತಮ್ಮ ಅಂಗಡಿಗಳನ್ನು ತೆರೆದಿರಲಿಲ್ಲ. ಮಾತ್ರವಲ್ಲದೇ ಶನಿವಾರ ಮಧ್ಯಾಹ್ನದಿಂದ ಹಳಿಯಾಳ ಪಟ್ಟಣದಲ್ಲಿ ವಾರದ ರಜೆಯಾಗಿದ್ದು ಕೂಡ ಕೆಲವು ಅಂಗಡಿಗಳು ಮುಚ್ಚಿದ್ದವು ಬಹುತೇಕ ಕಡೆಗಳಲ್ಲಿ ವ್ಯಾಪಾರ ವಹಿವಾಟುಗಳು ನಡೆದು ಪಟ್ಟಣದ ಸಹಜ ಸ್ಥಿತಿಯಲ್ಲಿತ್ತು ಹೊರತು ಬಂದ್ ಆಚರಣೆ ಮಾಡಲಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
Leave a Comment