ಕಾರವಾರ: 2017-18ನೇ ಸಾಲಿನ ಅಲ್ಪಸಂಖ್ಯಾತರ ಸಮುದಾಯದ ಅಭ್ಯರ್ಥಿಗಳಿಂದ ಭಾರತ ಸೈನಿಕ ನೇಮಕಾತಿ ರ್ಯಾಲಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಕೇಂದ್ರದ ಮೂಲಕ ಉಚಿತ ಆನ್ ಲೈನ್ ಭರ್ತಿ ಮಾಡಿ ಕೊಡಲಾಗುವುದು. ಅರ್ಜಿ ಸಲ್ಲಿಸಲು ಡಿಸೆಂಬರ 31 ಕೊನೆಯದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-220336 ಹಾಗೂ ತಾಲೂಕಾ ಮಾಹಿತಿ ಕೇಂದ್ರಗಳಾದ ಕಾರವಾರ -8971859211, ಭಟ್ಕಳ-08385-224945, ಶಿರಸಿ-9686403166, ಸಿದ್ದಾಪುರ-08389-230764, ಮುಂಡಗೋಡ-08301-222232, ಹಳಿಯಾಳ-08384-220499 ಸಂಪರ್ಕಿಸಬಹುದು ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment