ಹೊನ್ನಾವರ: ತಾಲೂಕಿನ ಕಾರ್ಮಿಕರ ವಿವಿದೋದ್ದೇಶಗಳ ಸಹಕಾರಿ ಸಂಘ ನಿಯಮಿತ, ಹೊನ್ನಾವರ ಮತ್ತು ಸಾಮರಸ್ಯ ಪತ್ತಿನ ಸಹಕಾರಿ ನಿಯಮಿತ, ಹೊನ್ನಾವರ ಇವರ ಸಂಯುಕ್ತ ಆಶ್ರಯದಲ್ಲಿ ಪದ್ಮಶ್ರೀ ವಿಜೇತ ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಸಂಗೀತ ವಿದ್ವಾನ್ ದಿ. ಸತ್ಯನಾರಾಯಣ ನಾಯ್ಕ ಗುಂಡಿಬೈಲ್ ಇವರಿಗೆ ಶೃದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ಡಿ. 28 ರಂದು ಗುರುವಾರ ರಾತ್ರಿ 9 ಗಂಟೆಗೆ ನಡೆಯಲಿದೆ.
ಶ್ರೀ ರಾಘವೇಶ್ವರ ಭಾರತೀ ಸವೇದ ಸಂಸ್ಕøತ ಪಾಠಶಾಲಾ ಆವರಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಸುನೀಲ್ ಬಿ.ನಾಯ್ಕ ಉದ್ಘಾಟಕರಾಗಿ ಆಗಮಿಸುವರು, ಸೇಫ್ ಸ್ಟಾರ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ (ಲಿ) ಅಧ್ಯಕ್ಷರಾದ ಜಿ. ಜಿ. ಶಂಕರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು, ಸಾಮರಸ್ಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಚಂದ್ರ ವಿ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಆರ್.ಪಿ.ನಾಯ್ಕ, ಸಾಮರಸ್ಯ ಪತ್ತಿನ ಸಹಕಾರಿ ಸಂಘದ ನಾಗೇಶ ನಾಯ್ಕ, ರಮೇಶ ವಿ. ಪಡ್ತಿ, ಗಣಪತಿ ನಾಯ್ಕ ಉಪಸ್ಥಿತರಿರುವರು.
ಕಲಾಧರ ಯಕ್ಷರಂಗ ಬಳಗ (ರಿ.) ಜಲವಳ್ಳಿ ಇವರ ಮೇಳದವರಿಂದ “ಶನೀಶ್ವರ ಮಹಾತ್ಮೆ ಮತ್ತು ಗದಾಯುದ್ಧ” ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ ಎಂದು ರಾಮಚಂದ್ರ ವಿ. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Comment