ಹಳಿಯಾಳ : ಹಳಿಯಾಳ ವಿಭಾಗದ ಅರಣ್ಯಗಳಲ್ಲಿ ವಾಡಿಕೆಯಂತೆ ಜನೆವರಿಯಿಂದ ಬೇಸಿಗೆ ಕಾಲದ ಅಂತ್ಯದವರೆಗೆ ಅರಣ್ಯ ಬೆಂಕಿ ಕಾಣಿಸಿಕೊಳ್ಳುವದು ಸಾಮಾನ್ಯವಾಗಿರುವುದರಿಂದ ಹಳಿಯಾಳ ಅರಣ್ಯ ಇಲಾಖೆಯು ಅರಣ್ಯದಂಚಿನ ಜನರಿಗೆ, ಗ್ರಾಮಸ್ಥರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಳಿಯಾಳ ವಲಯ ಅರಣ್ಯಾದಿಕಾರಿ ಪ್ರಸನ್ನ ಸುಬೇದಾರ ತಿಳಿಸಿದ್ದಾರೆ. ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ರಮೇಶ, ಸಹಾಯಕ ಅರಣ್ಯ ಸಂರಕ್ಷಣಾಧಕಾರಿ ಸಂತೋಶ ಕೆಂಚಪ್ಪನವರ ಮಾರ್ಗದರ್ಶನದಲ್ಲಿ ತಮ್ಮ ವ್ಯಾಪ್ತಿಯ ಕುರಿಗದ್ದಾ ಗ್ರಾಮದಲ್ಲಿ ಅಲ್ಲಿಯ ಗ್ರಾಮ ಅರಣ್ಯ ಸಮಿತಿ ಸದಸ್ಯರು ಹಾಗೂ ಇತರ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಅರಣ್ಯ ಬೆಂಕಿ ಹರಡದಂತೆ ಮಾಡಲು ಅವಶ್ಯಕವಿದ್ದ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಎಲ್ಲ ಗ್ರಾಮಸ್ಥರಿಗೆ “ತಾವೆಲ್ಲರೂ ಅರಣ್ಯ ಬೆಂಕಿ ಹರಡದಂತೆ ನೋಡಿಕೊಳಲು ಎಲ್ಲ ಪ್ರಯತ್ನ ಮಾಡಿ ಅರಣ್ಯ ಇಲಾಖೆಯೊಂದಿಗೆ ಸಹಕರಿಸುತ್ತೆವೆ ವನ ದೇವತೆ ಹಾಗೂ ಗ್ರಾಮ ದೇವತೆಯ ಹೆಸರಲ್ಲಿ ಪ್ರಮಾಣಿಸುತ್ತೇವೆ” ಎಂದು ಪ್ರತಿಜ್ಞೆ ಕೂಡ ಮಾಡಲಾಯಿತು ಎಂದು ತಿಳಿಸಿದ್ದಾರೆ. ಕರ್ಲಕಟ್ಟಾದಲ್ಲಿ ಕಾರ್ಯಕ್ರಮ :- ಇದೇ ರೀತಿ ಸಂಬ್ರಾಣಿ ವಲಯದ ಕರ್ಲಕಟ್ಟಾದಲ್ಲಿ ವಲಯ ಅರಣ್ಯಾಧಿಕಾರಿ ದಿಲೀಪ ನಾಯ್ಕ ನೇತೃತ್ವದಲ್ಲಿ ಅವರ ಸಿಬ್ಬಂದಿ ವರ್ಗ ಗ್ರಾಮಸ್ಥರಲ್ಲಿ ಅರಣ್ಯ ಬೆಂಕಿಯ ಬಗ್ಗೆ ಅರಿವು ಮೂಡಿಸಿ ಬೆಂಕಿ ನಂದಿಸಲು ಕ್ರಮ ಕೈಗೊಳ್ಳವ ರೀತಿ ತಿಳಿಸಲಯಿತು. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಜಾರ್ಜ ಹಾಗು ಸಿಬ್ಬಂದಿ ಇದ್ದರು. ಮುಂದಿನ ಕೆಲವು ದಿನಗಳವರೆಗೆ ಬೆಂಕಿ ಬೀಳುವ ಸಂಭಾವ್ಯ ಸ್ಥಳಗಳಲ್ಲಿ ಬೆಂಕಿ ಶಮನಗೊಳಿಸುವ ವಿಶೇಷ ಶಿಬಿರಗಳನ್ನು ನಡೆಸಲಾಗುವದೆಂದು ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ರಮೇಶ ಹೇಳಿದ್ದಾರೆ.
Leave a Comment