ಹಳಿಯಾಳ: ಆಕಸ್ಮಿಕ ನಡೆದ ವಿದ್ಯುತ್ ಅವಘಡದಿಂದ ಹಗವಿ ಗ್ರಾಮದಲ್ಲಿ 3 ಮನೆಗಳಿಗೆ ಹಾನಿ ಅನುಭವಿಸಿದ್ದ ರೈತ ಕುಟುಂಬಗಳಿಗೆ ಜಿಲ್ಲಾ ಮಧ್ಯವರ್ತಿ(ಕೆಡಿಸಿಸಿ) ಬ್ಯಾಂಕನಿಂದ ವಿಧಾನ ಪರಿಷತ್ ಸದಸ್ಯರು ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ ಅಧ್ಯಕ್ಷರಾದ ಎಸ್.ಎಲ್ ಘೊಟ್ನೆಕರ ಅವರು ಆರ್ಥಿಕ ನೆರವು ಮಂಜೂರಿ ಮಾಡಿಸಿದ್ದು ಶನಿವಾರ ಚೆಕ್ ಅನ್ನು ವಿತರಿಸಿದರು. ತಾಲೂಕಿನ ಹವಗಿ ಗ್ರಾಮದಲ್ಲಿ 20-12-2017ರ ಸಂಜೆ ನಡೆದ ಬೆಂಕಿ ಅನಾಹುತದಲ್ಲಿ ಬೆಳಗಾಂವಕರ ಕುಟುಂಬದವರ ಮೂರು ಮನೆಗಳಿಗೆ ಬೆಂಕಿ ತಗುಲಿ ಹಾನಿಯನ್ನು ಅನುಭವಿಸಿದ್ದರು ಆ ಕುಟುಂಬದ ರತನ ಬೆಳಗಾಂವಕರ, ಮಾರುತಿ ಬೆಳಗಾಂವಕರ ಅವರಿಗೆ ತಲಾ 10 ಸಾವಿರ ರೂ. ಹಾಗೂ ನಾಗೂಲಿ ಗುಂಡು ಬೆಳಗಾಂವಕರಗೆ 5 ಸಾವಿರ ರೂ. ಹಾಗೂ ಬೈಕ್ ಅಪಘಾತದಲ್ಲಿ ಮೃತಪಟ್ಟ ಕೇಸರೊಳ್ಳಿ ಗ್ರಾಮದ ಯುವಕ ಯುವಕ ನಿವೇದಿತ ಹೊಳೆಪ್ಪಾ ಬಾಲೇಕರ (19) ಕುಟುಂಬಕ್ಕೆ 15 ಸಾವಿರ ಆರ್ಥಿಕ ನೆರವಿನ ಚೆಕ್ಕನ್ನು ಘೋಟ್ನೇಕರ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಎಪಿಎಮಸಿ ಅಧ್ಯಕ್ಷರಾದ ಶ್ರೀನಿವಾಸ ಘೊಟ್ನೇಕರ, ಪುರಸಭೆ ಸದಸ್ಯರಾದ ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ, ಪ್ರಮುಖರಾದ ಎಮ್.ವಿ.ಘಾಡಿ, ಪ್ರಕಾಶ ಕಿತ್ತೂರ, ಶಿವಪುತ್ರಪ್ಪಾ ನುಚಂಬ್ಲಿ ಇತರರು ಇದ್ದರು.
Leave a Comment