ಹಳಿಯಾಳ: ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯೊರ್ವಳ ಮೇಲೆ ಆಕೆಯ ಮಲ ತಂದೆಯೇ ಅತ್ಯಾಚಾರ ಎಸಗಿದ್ದು ಆಕೆ ಇಗ ಗರ್ಭೀಣಿಯಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಹಳಿಯಾಳ: ಅಪ್ರಾಪ್ತ ವಯಸ್ಸಿನ ಶಾಲಾ ಬಾಲಕಿಯೊರ್ವಳ ಮೇಲೆ ಆಕೆಯ ಮಲ ತಂದೆಯೇ ಅತ್ಯಾಚಾರ ಎಸಗಿದ್ದು ಆಕೆ ಇಗ ಗರ್ಭೀಣಿಯಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದ್ದು ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಮಹಾರಾಷ್ಟ್ರ ಮೂಲದ 50 ವರ್ಷ ವಯಸ್ಸಿನ ಪರಶುರಾಮ ಪಾಟೀಲ್ ಎನ್ನುವ ಕಾಮಿ ಮಲ ತಂದೆಯೇ ಅತ್ಯಾಚಾರ ಆರೋಪಿಯಾಗಿದ್ದಾನೆ. ಪಕ್ಕದ ಧಾರವಾಡ ಜಿಲ್ಲೆಯ ಅಳ್ನಾವರದಿಂದ ಹಳಿಯಾಳದ ಶಾಲೆಯೊಂದಕ್ಕೆ ಬರುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯೇ ಅತ್ಯಾಚಾರಕ್ಕೆ ಒಳಗಾಗಿ ಸದ್ಯ 4 ತಿಂಗಳ ಗರ್ಭೀಣಿಯಾಗಿರುವ ಮುಗ್ದ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆಯ ತಾಯಿಯ ಮೊದಲ ಗಂಡ ಹಾಗೂ ಈಕೆಯ ತಂದೆಯಾಗಿರುವ ರಾಜೇಶ್ ಜಿನಪ್ಪನವರ ಪಾಶ್ರ್ವ ವಾಯು ಪಿಡಿತನಾಗಿದ್ದು ತನ್ನ ಹೆಂಡತಿಯಿಂದ ದೂರವಾಗಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿಯ ತಾಯಿ 2ನೇ ಮದುವೆಯಾಗಿದ್ದು ಆರೋಪಿ ಪರಶುರಾಮ ಪಾಟೀಲ್ನೇ ಅವಳ ಈಗಿನ ಪತಿಯಾಗಿದ್ದಾನೆ. ಆರೋಪಿ ಪಟ್ಟಣದ ದುರ್ಗಾನಗರದಲ್ಲಿ ವಾಸಿಸುತ್ತಿದ್ದು ಮಲ ತಂದೆಯ ಮನೆಗೆ ಬರುತ್ತಿದ್ದ ಮಗಳ ಮೇಲೆ ಕಣ್ಣು ಹಾಕಿರುವ ಕಾಮಿ ತಂದೆ ಆಕೆಯ ಮೇಲೆ ಕಳೆದ 5-6 ತಿಂಗಳಿಂದ ಅತ್ಯಾಚಾರ ಎಸಗಿದ್ದು ಯಾರಿಗಾರದು ಹೇಳಿದರೇ ಹಾನಿ ಮಾಡುವುದಾಗಿ ಬೇದರಿಕೆ ಒಡ್ಡಿದ್ದನೆಂದು ಹೇಳಲಾಗಿದೆ. ಹಳಿಯಾಳ ಠಾಣೆಯಲ್ಲಿ ಈ ಕುರಿತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪಿಎಸ್ಐ ಹೂಗಾರ್ ಪ್ರಕರಣ ದಾಖಲಿಸಿಕೊಂಡಿದ್ದು ಸಿಪಿಐ ಸುಂದರೇಶ ಹೊಳೆನ್ನವರ ತನಿಖೆ ನಡೆಸುತ್ತಿದ್ದು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.
Leave a Comment