ಹಳಿಯಾಳ:- ಉ.ಕ.ಜಿಲ್ಲೆ ಕುಮಟಾದ ನಿರ್ಮಲಾ ಹೈಸ್ಕೂಲ್ನಲ್ಲಿ ನಡೆದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇನಸ್ಪಾಯರ್ ಅವಾರ್ಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹಳಿಯಾಳ ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಯಡೋಗಾದ ವಿದ್ಯಾರ್ಥಿನಿ ಪ್ರಿಯಾ ಧುಮಾಳಿ ತಯಾರಿಸಿದ “ ಚರಂಡಿ ನೀರಿನ ಶುಧ್ಧೀಕರಣ ಘಟಕ “ ಮಾದರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಒಟ್ಟೂ 300 ರಕ್ಕೂ ಅಧಿಕ ಮಾದರಿಗಳು ಪ್ರದರ್ಶನಗೊಂಡಿದ್ದು ಜಿಲ್ಲೆ ಮತ್ತು ಹಳಿಯಾಳ ತಾಲೂಕಿನಿಂದ ರಾಜ್ಯ ಮಟ್ಟದ ಪ್ರದರ್ಶನಕ್ಕೆ ಆಯ್ಕೆಯಾದ ಏಕೈಕ ಮಾದರಿ ಈದಾಗಿದೆ. ಮತ್ತೋರ್ವ ವಿದ್ಯಾರ್ಥಿನಿ ಹೇಮಾವತಿ ಮಿಟಕಾರ ತಯಾರಿಸಿದ ಪ್ರದರ್ಶಿಸಿದ “ಸುರಕ್ಷಾ ವಾಹನ” ಮಾದರಿ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿ ಪ್ರಶಂಸೆ ಪಡೆದುಕೊಂಡಿದೆ. ಈ ಎರಡು ಮಾದರಿಗಳನ್ನು ತಯಾರಿಸಲು ಶಾಲೆಯ ವಿಜ್ಞಾನ ಶಿಕ್ಷಕಿಯಾದ ಶಿಲ್ಪಾ ರಾಯ್ಕರ ಮಾರ್ಗದರ್ಶನ ನೀಡಿದ್ದು ಶಿಕ್ಷಕಿ ಶಿಲ್ಪಾ ಹಾಗೂ ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಮ್. ಮುಲ್ಲಾ, ಎಸ್.ಡಿ.ಎಮ್. ಸಿ. ಅಧ್ಯಕ್ಷ ರಾಬರ್ಟ ಕೆರವಾಡಕರ, ಮುಖ್ಯ ಶಿಕ್ಷಕ ಪ್ರಕಾಶ ಶೆಟ್ಟಿ ಹಾಗೂ ಸಿಬ್ಬಂದಿ, ಪಾಲಕರು ಅಭಿನಂದಿಸಿದ್ದಾರೆ.
Leave a Comment