ಹೊನ್ನಾವರ : ಭಾರತದ ಹೆಮ್ಮೆ ಸಂಸ್ಕೃತ ಭಾಷೆಯ ಪ್ರಚಾರ ಪ್ರಸಾರಕ್ಕಾಗಿಯೇ ಸಮರ್ಪಿತವಾಗಿ ಶ್ರಮಿಸುತ್ತಿರುವ ಅಂತಾರಾಷ್ಟ್ರಿಯ ಸಂಸ್ಥೆ ಸಂಸ್ಕೃತ ಭಾರತಿಯು ೯-೨-೨೦೧೮, ಶನಿವಾರದಂದು ತಾಲೂಕಿನ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಒಂದು ದಿನದ ಜಿಲ್ಲಾ ಸಮ್ಮೇಳನವನ್ನು ಆಯೋಜಿಸಿದೆ.
ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ನೆರವೇರಿಸಲಿದ್ದು ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ಭಾಷಾ ನಿಕಾಯದ ಮುಖ್ಯಸ್ಥರೂ ಸಂಸ್ಕೃತ ನಿರ್ದೇಶನಾಲಯದ ನಿರ್ದೇಶಕರೂ ಪ್ರೊ. ಗಿರೀಶ್ಚಂದ್ರರವರು ಮುಖ್ಯ ಅತಿಥಿಗಳಾಗಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿಯವರು ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಕಡತೋಕೆಯ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಸ್ ಶಂಭುಭಟ್ಟರು ಅಧ್ಯಕ್ಷತೆ ವಹಿಸುತ್ತಾರೆ. ಶಾಲಾ – ಕಾಲೇಜು ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಸ್ಮರಣಶಕ್ತಿ, ಅಂತ್ಯಾಕ್ಷರೀ ಮುಂತಾದ ಆಕರ್ಷಕ ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ.
ಜಿಲ್ಲೆಯ ಸಂಸ್ಕೃತಾಭಿಮಾನಿಗಳು ಶಾಲಾ ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು, ಸಾರ್ವಜನಿಕರು ತಪ್ಪದೇ ಭಾಗವಹಿಸಬೇಕೆಂದು ಸಂಸ್ಕೃತ ಭಾರತೀಯ ಪ್ರಾಂತಾಧ್ಯಕ್ಷ ವಿದ್ವಾನ್ ವಿ ಜಿ ಹೆಗಡೆ ಗುಡ್ಗೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave a Comment