• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಮಹಾನ್ ಭಾರತ ಕೇಸರಿ-2018 ಕಿರಿಟ ಮುಡಿಗೆರಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ತೆರೆ

February 13, 2018 by Yogaraj SK Leave a Comment

ಹಳಿಯಾಳ:-  ಫೆಬ್ರುವರಿ 10 ರಿಂದ 12 ರವರೆಗೆ 3 ದಿನಗಳ ಕಾಲ ಪಟ್ಟಣದ ಮೋತಿಕೆರೆಯ ಹತ್ತಿರದ ಜಿಲ್ಲಾ ಕುಸ್ತಿ ಆಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹರ್ಯಾಣಾದ ಕೃಷ್ಣಕುಮಾರ ಬಂಗಾರದ ಪದಕ,ರೂ.2.25ಲಕ್ಷ ನಗದು ಹಾಗೂ ಬೆಳ್ಳಿ ಗದೆ ಪಡೆದು  70 ಕೆಜಿ ಮೆಲ್ಪಟ್ಟ ಮಹಾನ್ ಭಾರತ ಕೇಸರಿ-2018 ಕಿರಿಟ ಮುಡಿಗೆರಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ತೆರೆ ಎಳೆದರು.  ವ್ಹಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್, ಉತ್ಕರ್ಷ ಉ.ಕ ಸಮಗ್ರ ಗ್ರಾಮೀಣ ಅಬೀವೃದ್ದಿ ಯೋಜನೆ ಹಾಗೂ ರಾಜ್ಯ ಕುಸ್ತಿ ಅಸೋಸಿಯೆಶನ್ ರವರ ಆಶ್ರಯದಲ್ಲಿ ದಿ.ವಿಶ್ವನಾಥರಾವ ರಘುನಾಥರಾವ ದೇಶಪಾಂಡೆ ಸ್ಮರಣಾರ್ಥ ಈ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು. ವಿವಿಧ ತೂಕಗಳ ವಿಭಾಗದಲ್ಲಿ 459 ಪೈಲ್ವಾನರು ಭಾಗವಹಿದ್ದ    ಪಂದ್ಯಾವಳಿಯ ಅಂತಿಮ ಹಣಾಹಣಿಯು ಸೋಮವಾರ ರಾತ್ರಿ 10.30ರ ವರೆಗೆ ನಡೆಯಿತು.  ಸಾಕ್ಷಿ ಮಲಿಕ ಭಾಗಿ :- ಈ ಪಂದ್ಯಾವಳಿ ವೀಕ್ಷಿಸಲು ಒಲಂಪಿಕ್ ಪದಕ ವಿಜೇತೆ ಭಾರತದ ಖ್ಯಾತ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ  ಹಾಗೂ ಅವಳ ಪತಿ ಖ್ಯಾತ ರಾಷ್ಟ್ರಮಟ್ಟದ ಕುಸ್ತಿ ಪಟು ಸತ್ಯವರತ ಕಾಡಿಯಾನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು ಅಂತಿಮ ದಿನ ಸ್ಟಾರ್ ಮೆರಗು ಕುಸ್ತಿ ಪ್ರೇಮಿಗಳಿಗೆ ಸಂತಸ ಮೂಡಿಸಿತ್ತು. ಅಂತಿಮ ಪಂದ್ಯಾವಳಿಗೆ ಚಾಲನೆ ನೀಡಿದ ಅವರು ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಾವಿರಾರು ಅಭಿಮಾನಿಗಳು ಅವರೊಂದಿಗೆ ಸೆಲ್ಫಿ, ಪೊಟೊಗಳನ್ನು ಕ್ಲಿಕ್ಕಿಸಿಕೊಂಡು ಹರ್ಷಪಟ್ಟರು.  ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಆರ್.ವಿ.ದೇಶಪಾಂಡೆ ಹಳಿಯಾಳದ ಕುಸ್ತಿ ಅಖಾಡವನ್ನು ಅತ್ಯಾಧುನಿಕವಾಗಿ ನಿರ್ಮಿಸಲು 2 ಕೋಟಿ ಮಂಜೂರಿ ಮಾಡಲಾಗಿದ್ದು ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದ್ದು ವಿ.ಆರ್.ಡಿಎಮ್ ಟ್ರಸ್ಟ್‍ನಿಂದ ಕ್ರೀಡೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹನ ದೊರೆಯಲಿದೆ ಎಂದು ಘೊಷಿಸಿದರು.  ಟ್ರಸ್ಟ್‍ನ ಧರ್ಮದರ್ಶಿ ಪ್ರಶಾಂತ ದೇಶಪಾಂಡೆ, ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಮಾತನಾಡಿದರು.  ಪ್ರಮುಖ ಕುಸ್ತಿಗಳ ಫಲಿತಾಂಶ ಈ ಕೆಳಗಿನಂತಿದೆ57 ಕೆಜಿ ಕರ್ನಾಟಕ ಚಾಂಪಿಯನ್ :- ಧಾರವಾಡ ಎಸ್ಟಿಸಿಯ ಪ್ರವೀಣ ಎಸ್.ಕೆ.-ಚಿನ್ನದ ಪದಕ ಹಾಗೂ ಬಾಗಲಕೊಟಿಯ ಮಹೇಶ ಎಸ್.ಬಿ.-ಬೆಳ್ಳಿ ಪದಕ.  61ಕೆಜಿ ಕರ್ನಾಟಕ ಕಿಶೋರ:- ಎಮ್.ಇಜಿ ಬೆಂಗಳೂರಿನ ನಾಗರಾಜ ಎನ್-ಚಿನ್ನದ ಪದಕ ಹಾಗೂ ಬೆಕ್ವಾಡದ ವಿನಾಯಕ ವಿಜಿ-ಬೆಳ್ಳಿ ಪದಕ. 65 ಕೆಜಿ ಕರ್ನಾಟಕ ಕುಮಾರ :- ಬೆಳಗಾವಿಯ ರವಿ ಕೆಂಪನ್ನವರ- ಚಿನ್ನದ ಪದಕ ಹಾಗೂ ಮುಧೋಳಿನ ಗಣೇಶ ಪೂಜಾರಿ-ಬೆಳ್ಳಿ ಪದಕ.75 ಕೆಜಿ ಕರ್ನಾಟಕ ಕೆಸರಿ :- ಎಮ.ಇಜಿ ಬೆಂಗಳೂರಿನ ಸಿದ್ದನ್ನಾ ಪಾಟೀಲ್- ಚಿನ್ನದ ಪದಕ ಹಾಗೂ ಎಮ್.ಎಲ್.ಈಆರ್‍ಸಿ ಬೆಳಗಾವಿಯ ನಿಶಾಂತ ಪಾಟೀಲ್-ಬೆಳ್ಳಿ.70 ಕೆಜಿ ಮೆಲ್ಪಟ್ಟು ಕರ್ನಾಟಕ ಕಂಠೀರವ :- ಎಮ್.ಇಜಿ ಬೆಂಗಳೂರಿನ ಗೋಪಾಲ ಕೋಳಿ- ಬಂಗಾರದ ಪದಕ ಹಾಗೂ ಮುಧೋಳದ- ಸಂದೀಪ ಕಾಟೆ- ಬೆಳ್ಳಿ ಪದಕ.70 ಕೆಜಿ ಮೆಲ್ಪಟ್ಟ ಮಹಾನ್ ಭಾರತ ಕೇಸರಿ-2018 :- ಹರ್ಯಾಣಾದ ಕೃಷ್ಣಕುಮಾರ-ಬಂಗಾರದ ಪದಕ,ರೂ.2.25ಲಕ್ಷ ನಗದು ಹಾಗೂ ಬೆಳ್ಳಿ ಗದೆ ಮತ್ತು ಪಂಜಾಬದ ಸತ್ವಿಂದರಗೆ ರೂ.1ಲಕ್ಷ ನಗದು.

ಮಹಿಳೆಯರ ವಿಭಾಗ:-  ರಾಜ್ಯಮಟ್ಟದ ಮಹಾನ್ ಭಾರತ ಕೇಸರಿ-55 ಕೆಜಿ ಮೆಲ್ಪಟ್ಟ ಮಹಿಳೆಯರ ವೀರಮಾತಾ ಕಿತ್ತೂರರಾಣಿ ಚೆನ್ನಮ್ಮಾ ಭಾರತ ಕೇಸರಿ-2018 :- ಕೋಲ್ಹಾಪುರದ ನಂದಿನಿ ಸಾಳುಂಕೆ ಹಾಗೂ ಅದೇ ಪಟ್ಟಣದ ಶೃತಿ ಭೊಸಲೆ-ಬೆಳ್ಳಿ ಪದಕ.54 ಕೆಜಿ ಮೆಲ್ಪಟ್ಟ ಮಹಿಳೆಯರ ಓನಿಕೆ ಓಬವ್ವಾ ಕರ್ನಾಟಕ ಕೇಸರಿ :-  ಹಳಿಯಾಳದ ಲೀನಾ ಸಿದ್ದಿ ಬಂಗಾರದ ಪದಕ ಹಾಗೂ ಆಳ್ವಾಸ್‍ನ ಆತ್ಮಶ್ರೀ ಬೆಳ್ಳಿ ಪದಕ.

watermarked Kusti 10 watermarked Kusti 9 watermarked Kusti 5

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 2018, ಉತ್ಕರ್ಷ, ಕಾಲ ಪಟ್ಟಣದ, ಕಿರಿಟ ಮುಡಿಗೆರಿಸಿಕೊಳ್ಳುವ, ಜಿಲ್ಲಾ ಕುಸ್ತಿ ಆಖಾಡ, ನಗದು, ಪಂದ್ಯಾವಳಿಗೆ ತೆರೆ, ಭಾರತ ಕೇಸರಿ, ಮಹಾನ್, ಮೂಲಕ, ಮೋತಿಕೆರೆಯ ಹತ್ತಿರ, ರೂ.2.25ಲಕ್ಷ, ವ್ಹಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್, ಹರ್ಯಾಣಾದ ಕೃಷ್ಣಕುಮಾರ ಬಂಗಾರದ ಪದಕ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,057 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...