ಹಳಿಯಾಳ:
ಪಟ್ಟಣದ ಅಂಚಿನಲ್ಲಿರುವ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ಕ್ರಾಸ್ ಸ್ಪೋಟ್ರ್ಸ್, ಸ್ಕೌಟ್ಸ್ & ಗೈಡ್ಸ್ ಘಟಕ ಮತ್ತು ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ನವನಗರ ಹುಬ್ಬಳ್ಳಿ ಇವರ ಸಹಯೋಗದಿಂದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು. ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಧರ್ಮದರ್ಶಿ ಪ್ರಶಾಂತ ಆರ್ ದೇಶಪಾಂಡೆ ರಕ್ತದಾನ ಶಿಬಿರ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ರಕ್ತದಾನ ಮಹಾದಾನವಾಗಿದ್ದು ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಒಟ್ಟೂ 67 ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದ್ದು ಈ ರಕ್ತವನ್ನು ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಆಸ್ಪತ್ರೆಗೆ ಹಾಗೂ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ರವಾನಿಸಲಾಯಿತು.ಕಾರ್ಯಕ್ರಮದಲ್ಲಿ ಡಾ.ಉಮೇಶ ಹಳ್ಳಿಕೇರಿ, ಪ್ರಾಂಶುಪಾಲ ಡಾ.ಚಂದ್ರಶೇಖರ ಲಮಾಣಿ, ರೆಡ್ಕ್ರಾಸ್ ಸಂಚಾಲಕ ಡಾ.ರೇಖಾ ಎಂ.ಆರ್. ಇದ್ದರು. ವಿದ್ಯಾರ್ಥಿ ಪ್ರತಿನಿಧಿ ಅಪ್ಪಾಸಾಹೇಬ ಹುಂಡೇಕರ, ಅಕ್ಷಯ ಬಾಳೇಕುಂದ್ರಿ, ಚೇತನ ಅಷ್ಟೇಕರ ಕಾರ್ಯಕ್ರಮ ನಿರ್ವಹಿಸಿದರು.
Leave a Comment