ಹಳಿಯಾಳ:
ಸರ್ಕಾರದೊಂದಿಗೆ ಶಿಕ್ಷಣ ರಂಗದ ಅಭಿವೃದ್ದಿಗೆ ಖಾಸಗಿಯವರು ಸಹ ಕೈ ಜೋಡಿಸಿದರೇ ಶೈಕ್ಷಣಿಕ ಉನ್ನತಿ ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೇ ಸಂಘ ಸಂಸ್ಥೆಗಳು ಸಹ ಮಾರ್ಗದರ್ಶನ ಮಾಡುವುದರಿಂದ ಶಿಕ್ಷಣ ಸಾಮಾನ್ಯ ಜನರಿಗೂ ತಲುಪಲು ಸುಲಭವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ಕೆ.ಎಲ್.ಎಸ್ ಸೊಸಾಟಿಯ ವಿಜ್ಞಾನ ಮತ್ತು ಬಿಸಿಎ ಪದವಿ ಪೂರ್ವ ಕಾಲೇಜಿನ ಬಿಸಿಎ ವಿಭಾಗದ ಎಲ್ಲಾ 150 ವಿದ್ಯಾರ್ಥಿಗಳಿಗೆ ದಾಲ್ಮೀಯಾ ಸಿಮೆಂಟ್ ಕಂಪನಿಯವರು ನೀಡಿದ ಲ್ಯಾಪ ಟಾಪ್ಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರವು ಶಿಕ್ಷಣವನ್ನು ಜನರ ಮನೆ ಬಾಗಿಲಿಗೆ ತಲುಪಿಸಿದೆ. ಸೈಕಲ್ ವಿತರಣೆ, ಶೂ ವಿತರಣೆ, ಹಾಲು ಹಂಚಿಕೆ, ಸಮವಸ್ತ್ರ ವಿತರಣೆ, ಇದೀಗ ಉಚಿತ್ ಬಸ್ ಪಾಸ್ ಮತ್ತು ಹಾಸ್ಟೇಲ್ಗಳ ನಿರ್ಮಾಣ, ಶಿಕ್ಷಕರ ನೇಮಕಗಳನ್ನು ಮಾಡುವುದರ ಮೂಲಕ ಶೈಕ್ಷಣಿಕ ಅಭಿವೃದ್ದಿಗೆ ಪ್ರಾಧ್ಯಾನತೆ ನೀಡಲಾಗಿದೆ ಎಂದರು.
ದಾಲ್ಮಿಯಾ ಸಿಮೆಂಟ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹರಮಿತ್ ಸಿಂಗ್ ಅವರು ಮಾತನಾಡಿ, ಸರ್ಕಾರದ ಜೊತೆಗೆ ಕೈಗಾರಿಕೋಧ್ಯಮಿಗಳು ಕೈ ಜೋಡಿಸುವುದರಿಂದ ಇನ್ನಷ್ಟು ವೇಗವಾಗಿ ಶೈಕ್ಷಣಿಕ ಅಭಿವೃದ್ದಿ ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿ ಪ್ರಜೆಯೂ ಸಹ ಶಿಕ್ಷಣ ಪಡೆಯಲು ಮುಂದಾಗಬೇಕಾಗಿದೆ. ಅಲ್ಲದೇ ಇಂದಿನ ಶಿಕ್ಷಣ ಕೌಶಲ್ಯಗಳ ಜೊತೆಗೆ ಮಾನವಿಯ ಮೌಲ್ಯಗಳನ್ನು ಸಹ ಹೊಂದಬೇಕೆಂದು ಕರೆ ನೀಡಿದರು.
ಕೈಗಾರಿಕಾ ಸಚಿವ ದೇಶಪಾಂಡೆ ಅವರೊಂದಿಗೆ ವಿದ್ಯಾರ್ಥಿಗಳು ಕೈಗಾರಿಕೆಗಳ ಅಭಿವೃದ್ದಿ ಮತ್ತು ತಂತ್ರಜ್ಞಾನದ ಕುರಿತು ಸಂವಾದ ನಡೆಸಿದರು, ವಿದ್ಯಾರ್ಥಿಗಳು ಕೇಳಿದ ಸುಮಾರು 20 ಕ್ಕೂ ಅಧಿಕ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದರು. ಸಮಾರಂಭದಲ್ಲಿ ಜಿಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಸ್. ಮುನವಳ್ಳಿ ಇದ್ದರು.
Leave a Comment