ಹಳಿಯಾಳ:- ಮರಾಠಾ ಸಮಾಜದ ಮುಖಂಡ, ಹಳಿಯಾಳ ತಾಲೂಕಾ ಕಾಂಗ್ರೇಸ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಆರ್ ವ್ಹಿ ದೇಶಪಾಂಡೆಯವರ ನಿಕಟವರ್ತಿ ಯಡೋಗಾ ಗ್ರಾಮದ ಯಲ್ಲಾರಿ ಭುಜಂಗ ಗೌಡಾ ತಮ್ಮ 86 ನೇ ಇಳಿವಯಸ್ಸಿನಲ್ಲಿ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಹಿರಿಯ ಮುತ್ಸದ್ದಿಯಾಗಿದ್ದ ಈ ಹಿಂದೆ ಆರ್.ಎಸ್.ಎಸ್ ಸೊಸೈಟಿ, ಟಿ.ಡಿ.ಬಿ, ಪಿ ಎಲ್ ಡಿ ಬ್ಯಾಂಕ,. ಕಾಂಗ್ರೇಸ್ ಪಕ್ಷದ ತಾಲೂಕಾ ಅಧ್ಯಕ್ಷರು (ದೇವರಾಜ ಅರಸು ಕಾಲದಲ್ಲಿ), ಯಡೋಗಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಹಳಿಯಾಳದ ಅರ್ಬನ್ ಬ್ಯಾಂಕ, ತಾಲೂಕಾ ಆಶ್ರಯ ಯೋಜನೆಯ ಸಮಿತಿ, ಮಾರ್ಕೆಟಿಂಗ ಸೊಸೈಟಿಯ ಅಧ್ಯಕ್ಷರಾಗಿ ಹಾಗೂ ಎ.ಪಿ.ಎಂ.ಸಿ ನಿರ್ದೇಶಕರಾಗಿ, ತಾಪಂ ಸದಸ್ಯರಾಗಿ ಹೀಗೆ ಹಲವು ಹುದ್ದೇಗಳನ್ನು ಅಲಂಕರಿಸಿ ಸುಧೀರ್ಘ ಸೇವೆ ಸಲ್ಲಿಸಿದ ಅವರು ಒಬ್ಬ ಮಗ, ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಸಚಿವರು, ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗಿ :- ಮೃತರ ಮನೆಗೆ ತೆರಳಿದ ಸಚಿವ ಆರ್.ವಿ.ದೇಶಪಾಂಡೆ ಹಾಗೂ ಎಮ್.ಎಲ್.ಸಿ.ಎಸ್.ಎಲ್.ಘೋಟ್ನೆಕರ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹಿರಿಯ ಮುತ್ಸದ್ದಿ ನೇರ, ನಿಷ್ಟುರ ಪ್ರಾಮಾಣಿಕ ಮುಖಂಡರಾಗಿದ್ದ ಯಲ್ಲಾರಿ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಅಂತ್ಯಕ್ರಿಯೆಯಲ್ಲಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಯವರು ಸೆರಿದಂತೆ ಹಲವಾರು ಮುಖಂಡರು, ಅಭಿಮಾನಿಗಳು, ಸಾವಿರಾರು ಜನರು ಪಾಲ್ಗೊಂಡಿದ್ದರು.
Leave a Comment