ಹಳಿಯಾಳ:-
ಪಠ್ಯ ಪುಸ್ತಕದೊಂದಿಗೆ ಸಾಮಾನ್ಯ ಜ್ಞಾನವನ್ನು ಗಳಿಸಿರಿ ಅಲ್ಲದೇ ಪ್ರಸ್ತುತ ಯಾಂತ್ರಿಕ ಯುಗದಲ್ಲಿ ವಿದ್ಯೆ ಸಂಪಾದನೆ ಮಾಡದಿದ್ದರೇ ಸಮಾಜದಲ್ಲಿ ಗೌರವ ಸಿಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು. ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ, ಲೋಕೊಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಸಹಯೋಗದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಹಳಿಯಾಳದ ಧಾರವಾಡ ರಸ್ತೆಯಲ್ಲಿಯ(ಗಿರಿ ಪ್ಲಾಟ) ನಿರ್ಮಿಸಲಾದ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಬೇಕು ಇಲ್ಲಿ ಅಷ್ಟೇ ಅಲ್ಲದೇ ಮನೆ, ಶಾಲಾ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವಂತೆ ಕರೆ ನೀಡಿದ ಸಚಿವರು ಪ್ರತಿಯೊಬ್ಬ ಪಾಲಕರು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿ ವಿದ್ಯಾರ್ಥಿಗಳು ಜೀವನದಲ್ಲಿ ಗುರಿಹೊಂದಿ ಶ್ರಮಪಟ್ಟು ಕಾರ್ಯಮಾಡಿದರೇ ಯಶಸ್ಸು ದೊರೆಯುತ್ತದೆ ಎಂದರು. ಹಳಿಯಾಳ ಕ್ಷೇತ್ರದಲ್ಲಿ ತಮ್ಮ ಉದ್ಯಮಿ ಮಿತ್ರರಿಂದ ಸಿಎಸ್ಆರ್ ಯೋಜನೆಯಡಿ ಕೊಟ್ಯಂತರ ರೂ.ಗಳ ಅನುದಾನ ಹರಿದು ಬಂದಿದ್ದು ಶಾಲಾ, ಕಾಲೇಜುಗಳು, ರೈತರಿಗೆ ಸೇರಿದಂತೆ ವಿವಿಧ ಹಂತದಲ್ಲಿ ಸಹಕಾರಿಯಾಗಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದರು. ಒಂದು ವಾರದಲ್ಲಿ ನೂತನ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಈ ಸಂದರ್ಭದಲ್ಲಿ ತರಬೇತಿ ಹೊಂದಿದ ಕೆಲವು ಅರ್ಹ ಮಹಿಳಾ ಫಲಾನುಭವಿಗಳಿಗೆ ಸಚಿವರು ಹೊಲಿಗೆ ಯಂತ್ರಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಹಿಂ.ವ.ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಬಸವರಾಜ ಬಡಿಗೇರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ತಾಪಂ ಇಓ ಲಕ್ಷ್ಮಣರಾವ ಯಕ್ಕುಂಡಿ, ತಹಶೀಲ್ದಾರ್ ವಿದ್ಯಾಧರ ಗುಳಗುಳಿ, ಪಿಡಬ್ಲೂಡಿ ಅಧಿಕಾರಿ ಆರ್.ಎಚ್.ಕುಲಕರ್ಣಿ, ಹೆಸ್ಕಾಂ ಅಧಿಕಾರಿ ರವೀಂದ್ರ ಮೆಟಗುಡ್ಡ, ಬಿಇಓ ಸಮೀರ ಮುಲ್ಲಾ, ಸಹಾಯಕ ಕೃಷಿ ಅಧಿಕಾರಿ ನಾಗೇಶ ನಾಯ್ಕ ಇದ್ದರು.
Leave a Comment