• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸರ್ಕಾರದಿಂದ ಮಂಜೂರಾಗುವ ಯೋಜನೆಗಳನ್ನು ಅಧಿಕಾರಿಗಳೂ ಮತ್ತು ಜನಪ್ರತಿನಿಧಿಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು;ಸಚಿವ ಆರ್.ವಿ.ದೇಶಪಾಂಡೆ

February 28, 2018 by Yogaraj SK Leave a Comment

ಹಳಿಯಾಳ:  ಸರ್ಕಾರದಿಂದ ಮಂಜೂರಾಗುವ ಯೋಜನೆಗಳನ್ನು ಅಧಿಕಾರಿಗಳೂ ಮತ್ತು ಜನಪ್ರತಿನಿಧಿಗಳು  ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು ಅಂದಾಗ ಮಾತ್ರ ಸರ್ಕಾರದ ಉದ್ದೇಶ ಈಡೇರಲು ಸಾಧ್ಯವೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.  ತಾಲೂಕಿನ ಭಾಗವತಿ ಗ್ರಾಮದಲ್ಲಿ ಗೌಳಿ ಸಮುದಾಯ ಭವನದ ಶಿಲಾನ್ಯಾಸ ಹಾಗೂ ಮನೆ ದುರಸ್ತಿಗಾಗಿ ಮಂಜೂರಾದ ಚೆಕ್‍ಗಳನ್ನು ವಿತರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಸರ್ಕಾರ ನೂರಾರು ಕೋಟಿ ಅನುದಾನ ನೀಡುತ್ತಿದ್ದು ಜನರು ಅಭಿವೃದ್ದಿಪರ ಸರ್ಕಾರದ ಚಿಂತನೆಯನ್ನು ಅರಿಯಬೇಕು ಹಾಗೂ ಕಾಮಗಾರಿಗಳು ಗುಣಮಟ್ಟದಾಗಿರುವಂತೆ ಗ್ರಾಮಸ್ಥರು, ಜನಪ್ರತಿನಿಧಿಗಳು ನೋಡಿಕೊಳ್ಳಬೇಕೆಂದರು.  ವಿವಿಧ ಕಾಮಗಾರಿಗಳ, ಶಿಲಾನ್ಯಾಸ ಉದ್ಘಾಟನೆ: ಸಚಿವರು ಅಡ್ಡಿಗೇರಾ ಗ್ರಾಮದ ಅಂಗನವಾಡಿ ಕೇಂದ್ರÀ, ಕಾವಲವಾಡ ಗ್ರಾಮದ ಪಂಚಾಯತ್ ನೂತನ  ಕಟ್ಟಡ, ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟಿಸಿದರು ಹಾಗೂ ಕಾವಲವಾಡ ಗ್ರಾಮದ ಸಭಾಭವನದ ಶಿಲಾನ್ಯಾಸ ನೆರವೇರಿಸಿದರು.   ಮಹಿಳಾ ಸಂಘಟನೆಗಳ ಸಂಘದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ಎಸ್‍ಎಸ್‍ಎಲ್‍ಸಿಯಲ್ಲಿ ಗರಿಷ್ಟ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ತಾಲೂಕಿನ ಒಟ್ನಾಳ ಗ್ರಾಮದ  ನಿರಾಶ್ರಿತರಿಗೆ ಮಂಜೂರಾದ ಜಮೀನುಗಳ ಪಹಣಿಪತ್ರ ವಿತರಿಸಿದರು.  ಕಾರ್ಯಕ್ರಮದಲ್ಲಿ ವಿಧಾನ ಪರಷತ್ ಸದಸ್ಯ ಎಸ.ಎಲ್ ಘೋಟ್ನೇಕರ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣಕೆ, ಸದಸ್ಯರಾದ ಕೃಷ್ಣಾ ಪಾಟೀಲ, ಮಹೇಶ್ರೀ  ಮಿಶಾಳಿ, ಲಕ್ಮೀ ಕೋರ್ವೇಕರ, ಬ್ಲಾಕ್  ಕಾಂಗ್ರೇಸ್ ಅಧ್ಯಕ್ಷ ಸುಭಾಸ್  ಕೋರ್ವೇಕರ್, ತಾ ಪಂ ಅಧ್ಯಕ್ಷ ರೀಟಾ ಸಿದ್ಧಿ, ನೀಲವ್ವ ಮಡಿವಾಳ, ತಹಶಿಲ್ಧಾರ ವಿಧ್ಯಾಧರ ಗುಳಗುಳಿ, ತಾ.ಪಂ ಅಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ಹೆಸ್ಕಾಂನ ರವೀಂದ್ರ ಮೆಟಗುಡ್ಡ, ಆರ್.ಎಚ್ ಕುಲಕರ್ಣಿ ಇತರರು ಇದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಅಧಿಕಾರಿಗಳೂ ಮತ್ತು ಜನಪ್ರತಿನಿಧಿಗಳು, ಅರ್ಹ ಫಲಾನುಭವಿಗಳಿಗೆ, ಕಾರ್ಯನಿರ್ವಹಿಸಬೇಕು, ತಲುಪುವಂತೆ ಪ್ರಾಮಾಣಿಕತೆಯಿಂದ, ಸಚಿವ ಆರ್.ವಿ.ದೇಶಪಾಂಡೆ, ಸರ್ಕಾರದಿಂದ ಮಂಜೂರಾಗುವ ಯೋಜನೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar