ಹಳಿಯಾಳ ; ವಚನ ಸಾಹಿತ್ಯವು ಜೀವನ ನಡೇಸುವ ಕ್ರಮವಾಗಿದ್ದು ಅಸ್ಪøಶ್ಯತೆಯನ್ನು ಹೋಗಲಾಡಿಸಿ, ಜಾತಿ ಸಮಾನತೆ, ಲಿಂಗ ಸಮಾನತೆಯನ್ನು ತಂದು ಕೋಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಅಂದು ಮಾಡಿದ ವಚನ ಕ್ರಾಂತೀಯ ಪುನರುತ್ಥಾನ ಈಗ ಆಗಬೇಕಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಎಮ್.ಎನ್.ತಳವಾರ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀವಿರಕ್ತಮಠ ಮೈದಾನದಲ್ಲಿ ಉ.ಕ.ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘಟಣೆಗಳ ಸಹಯೋಗದೋಂದಿಗೆ ಹಮ್ಮಿಕೊಂಡ ವಚನ ಕ್ರಾಂತಿಯ ಪುನರುತ್ಥಾನ ಕಾರ್ಯಕ್ರಮ ವಿಚಾರ ಸಂಕಿರಣದಲ್ಲಿ ತಮ್ಮ ಸರ್ವಾಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ ಸಮಾಜ ಸುಧಾರಣೆಗೆ ವಚನ ಸಾಹಿತ್ಯದ ಪ್ರಮುಖ ಪಾತ್ರವಿದ್ದು ಯುವಕರು ವಚನ ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕೆಂದರು. ತಹಸಿಲ್ದಾರ ವಿದ್ಯಾದರ ಗುಳಗುಳಿ ಮಾತನಾಡಿ ರಾಮಾಯನ ಮಹಾಭಾರತ ಉಲ್ಲೇಖಿಸುತ್ತ ಶರಣಕ್ರಾಂತಿ ಪ್ರಸ್ತುತ ಸಮಾಜದ ಬಗ್ಗೆ ಮಾತನಾಡಿದರು ವಚನ ಸಾಹಿತ್ಯದ ಪ್ರಚಾರದಿಂದ ಪರಿವರ್ತನೆ ಸಾದ್ಯವೆಂದರು. ಅಖಿಲಭಾರತ ವೀರಶೈವ ಮಹಾಸಭಾದ ಉಕ ಜಿಲ್ಲಾಧ್ಯಕ್ಷ ಶ್ರೀಕಾಂತ ಹೂಲಿ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಎಮ್.ಬಿ.ತೊರಣಗಟ್ಟಿ ಮಾತನಾಡಿ ಜನ ವಚನ ಪಾಲನೆ ಜೀವನದಲ್ಲಿ ಅಳವಡಿಸಿಕೊಂಡು ಪ್ರಯೋಜನ ಪಡೆದರೆ ಕಂಡಿತ ಪರಿವರ್ತನೆ ಸಾದ್ಯವೆಂದರು. ಕಾರ್ಯಕ್ರಮ ಉಧ್ಘಾಟಿಸಿದ ಶ್ರೀಸುಬ್ರಮಣ್ಯಂ ಸ್ವಾಮಿಗಳು ನಿಜಗುಣ ಸಾಹಿತ್ಯ ಮತ್ತು ವಚನ ಸಾಹಿತ್ಯದ ಬಗ್ಗೆ ತಿಳಿಸಿ ವಚನಗಳ ಕ್ರಾಂತಿ ಪುನರುತ್ಥಾನ ಆಚರಣೆಗೆ ಬರಬೇಕಾದ ಅನಿವಾರ್ಯತೆ ಇದೆ ಎಂದರು. ಮೊದಲ ಗೋಷ್ಠಿಯ ವಿಚಾರ ಸಂಕಿರಣದ ವಿಷಯ ವಚನಕಾರರ ಮತ್ತು ಸಮಾನತೆ ಬಗ್ಗೆ ಅಂಕೋಲಾದ ಗೋಕಲೆ ಸೆಂಟನರಿ ಕಾಲೇಜಿನ ಪ್ರಾಧ್ಯಾಪಕ ಸಿದ್ದಲಿಂಗಸ್ವಾಮಿ ವಸ್ತ್ರದ ಅನುಭವ ಅನುಭಾವ ಅನಭೂತಿ,ಅನುಭವ ಮಂಟಪ ವಚನಗಳ ಅರ್ಥ ತಿಳಿಸಿ ಶರಣರು ಅನುಭವ ಮಂಟಪದಲ್ಲಿ ಮೇಲಿನವರು ಕೆಳಗಿನವರೊಂದಿಗೆ ಸಮೀಕರಿಸಿ ಜಾತಿಯತೆ ತೊಡೆದು ಹಾಗೆ ಸ್ವಸ್ಥ ಸಮಾಜದ ಕಲ್ಪನೆ ಕೊಟ್ಟರು ನಮ್ಮ ಉಳವಿ ನಾಡು ವಚನ ಸಾಹಿತ್ಯ ಉಳಿಸಿರುವುದಕ್ಕೆ ಎಲ್ಲರೂ ಹೆಮ್ಮೆ ಪಡಬೇಕೆಂದರು. 2ನೇ ಉಪನ್ಯಾಸ “ಅರ್ಥಸಮಾನತೆ” ಬಗ್ಗೆ ಕುಮಾರ ನಾರಾಯಣ ಮೇತ್ರಿ ಮಾತನಾಡಿ 12ನೇ ಶತಮಾನದ ಸಮಾಜದ ಆರ್ಥಿಕ ಸ್ಥಿತಿ ಬಡತನ ಶೋಷನೆ ಬಗ್ಗೆ ಹೇಳುತ್ತಾ ದುಡಿದು ತಿನ್ನುವ ಕಾಯಕ ಪ್ರಧಾನ ಸಮಾಜ ಕಟ್ಟುವಲ್ಲಿ ಶರಣರ ಕೊಡುಗೆ ಬಗ್ಗೆ ವಿವರಿಸಿದರು. ಮಹಾಂತ ದೇಸಾಯಿಸ್ವಾಮಿಯವರು ಲಿಂಗ ಸಮಾನತೆ ಬಗ್ಗೆ ಮಾತನಾಡಿದರು.
Leave a Comment