ಹಳಿಯಾಳ ;
ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬರುವ ದಿ 15 ರಂದು ಹಳಿಯಾಳಕ್ಕೆ ಆಗಮಿಸಿ ಬೆಳಿಗ್ಗೆ 11 ಗಂಟೆಗೆ ವಿಕಾಸ ಪರ್ವ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಜೆಡಿಎಸ್ ಪಕ್ಷದ ಹಳಿಯಾಳ ವಿಧಾನಸಭಾ ಕ್ಷೇತ್ರದ ಘೋಷಿತ ಅಭ್ಯರ್ಥಿ ಕೆ.ಆರ್.ರಮೇಶ ಹೇಳಿದರು. ಪಟ್ಟಣದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಸಂದರ್ಭದಲ್ಲಿ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ, ಮಹಾಪ್ರಧಾನ ಕಾರ್ಯದರ್ಶಿ ಬಿ.ಎಮ್ ಫಾರೂಖ್, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಆನಂದ ಅಸ್ನೋಟಿಕರ ಮೊದಲಾದವರು ಆಗಮಿಸಲಿದ್ದಾರೆಂದರು. ಪಟ್ಟಣದ ಯಲ್ಲಾಪೂರ ನಾಕಾ ಬಳಿಯ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಈ ಕ್ಷೇತ್ರದಲ್ಲಿ ಸಚಿವ ಆರ್.ವಿ.ದೇಶಪಾಂಡೆ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಎಂದು ಟಿಕಾ ಪ್ರಹಾರ ಮಾಡಿದರು. ವಿಕಾಶ ಪರ್ವ ಸಮಾವೇಶದ ಮೂಲಕ ದೇಶಪಾಂಡೆ ಅವರ ಮೋಸದ ರಾಜಕಾರಣವನ್ನು ಜನರ ಮುಂದೆ ಇಡಲಾಗುವುದು. ಸಾವಿರಕ್ಕೂ ಅಧಿಕ ಯುವಕರು ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಬೈಕ್ ರ್ಯಾಲಿಯನ್ನು ನಡೆಸುವುದರ ಮೂಲಕ ಜನರ ಗಮನ ಸೆಳೆಯಲಿದ್ದಾರೆ. ಈ ಸಂದರ್ಭದಲ್ಲಿ ಸಹದೇವ ಮಾಳವಿ, ಸುಭಾಶ ಗೌಡಾ, ಕೃಷ್ಣಾ ದುಗ್ಗಾಣಿ, ಮಂಜುಳಾ ವಡ್ಡರ, ನಾರಾಯಣ ದಡ್ಡಿ, ರೋಶನ್ ಬಾವಾಜಿ, ಇಸ್ಮಾಯಿಲ್ ಫೀರಜಾದೆ, ವೆಂಕಪ್ಪ ಗೌಡ,ಕಲ್ಯಾಣಿ ಮೇತ್ರಿ, ಸರದಾರ ಶೆಂಡೇವಾಲೆ, ನಂದಿನಿ ಲೋಟಲೆಕರ, ಕಲ್ಯಾಣಿ, ಅನಿಲ ಮೊದಲಾದವರು ಇದ್ದರು.
Leave a Comment