• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಕುರಿತು ಹೆಚ್ಚಿನ ಗಮನ ಹರಿಸಿ;ಪ್ರಶಾಂತ ಆರ್ ದೇಶಪಾಂಡೆ

March 13, 2018 by Yogaraj SK Leave a Comment

ಹಳಿಯಾಳ: ಯುವಕರು ರಾಜಕೀಯ ಜ್ಞಾನ ಪಡೆಯುವುದರ ಜೊತೆಗೆ ರಾಜ್ಯದಲ್ಲಿ ನಡೆಯುವ ರಾಜಕೀಯ ಬೆಳವಣಿಗೆಗಳ ಕುರಿತು ಹೆಚ್ಚಿನ ಗಮನ ಹರಿಸಿ ಮುಂದಿನ ದಿನಗಳಲ್ಲಿ ಅಭಿವೃದ್ದಿ ಪರ ಉತ್ತಮರಿಗೆ ಮತದಾನ ಮಾಡುವುದರ ಮೂಲಕ ರಾಜ್ಯದ ಅಭಿವೃದ್ದಿಗೆ ತಮ್ಮ ಅಮೂಲ್ಯ ಮತ ನೀಡಬೇಕೆಂದು ಕೆಪಿಸಿಸಿ ಸದಸ್ಯ ಪ್ರಶಾಂತ ಆರ್ ದೇಶಪಾಂಡೆ ಯುವಕರಿಗೆ ಕರೆ ನೀಡಿದರು.  ಪಟ್ಟಣದ ಡಾ. ಬಾಬು ಜಗಜೀವನರಾಮ್ ಸಭಾಭವನದಲ್ಲಿ ನಡೆದ ಬ್ಲಾಕ್ ಕಾಂಗ್ರೇಸ್ ಕಮಿಟಿಯ ಹಳಿಯಾಳ ಮತ್ತು ಜೋಯಿಡಾ ಮತ ಕ್ಷೇತ್ರದ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರವನ್ನು ಪ್ರವೇಶ ಮಾಡುವುದರ ಮೂಲಕ ಮೌಲ್ಯಯುತ ರಾಜಕೀಯಕ್ಕೆ ಮುನ್ನಡೆಯಬೇಕೆಂದ ಅವರು ಅಭಿವೃದ್ದಿಯು ಇಂದಿನ ಚಿಂತನೆಯಾಗಬೇಕಾಗಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೇಸ್ ಪಕ್ಷವು ಗ್ರಾಮ ಪಂಚಾಯತ, ಜಿಪಂ ಮತ್ತು ಪುರಸಭೆಗಳ ಸ್ಥಾನಗಳಲ್ಲಿ ಶೇ 30 ರಷ್ಟು ಸ್ಥಾನಗಳನ್ನು ಯುವಕರಿಗೆ ಮೀಸಲಿಡಲಾಗುವುದೆಂದರು.  ಬಿಜೆಪಿ ಪಕ್ಷವು ಜನರ ಮಧ್ಯೆ ಜಾತಿಯ ವಿಷ ಬೀಜವನ್ನು ಬಿತ್ತುತ್ತಾ ಸಾಗಿದೆ. ಅದನ್ನು ಸಹ ಇಂದಿನ ಯುವಕರ ಅರಿಯಬೇಕಾಗಿದೆ. ಧರ್ಮದ ಬಗ್ಗೆ ಆಸಕ್ತಿ ಇರುವುದರ ಜೊತೆಗೆ ಬೇರೆ ಧರ್ಮದ ಕುರಿತು ಗೌರವನ್ನು ಸಹ ಬೆಳೆಸಿಕೊಳ್ಳಬೇಕಾಗಿದ್ದು, ಬಿಜೆಪಿಯವರು ಹಿಂದೂಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿರುವುದು ದೌರ್ಭಾಗ್ಯದ ಸಂಗತಿ ಎಂದರು.  ಯುವ ಮತದಾರರು ಚುನಾವಣೆಯ ಸಮಯದಲ್ಲಿ ಯಾವುದೇ ರೀತಿಯ ಆಶೆ ಆಮಿಷಗಳಿಗೆ ಬಲಿಯಾಗದೇ ತಮ್ಮ ಪವಿತ್ರವಾದ ಮತವನ್ನು ಉತ್ತಮ ಚಾರಿತ್ರ ಮತ್ತು ಅಭಿವೃದ್ದಿಯನ್ನು ಮಾಡುವ ಅಭ್ಯರ್ಥಿಗೆ ನೀಡಬೇಕಾಗಿದೆ. ಕಾಂಗ್ರೇಸ್ ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರುವುದರ ಜೊತೆಗೆ ಯುವಕರಿಗಾಗಿ ಹೊಸ ಹೊಸ ಯೋಜನೆಗಳನ್ನು ನೀಡಲಿದೆ ಎಂದರು.ಇದೇ ಸಂದರ್ಭದಲ್ಲಿ ಹಳಿಯಾಳ ದಾಂಡೇಲಿ ಮತ್ತು ಜೋಯಿಡಾಗಳಿಂದ ಆಗಮಿಸಿದ್ದ ಸುಮಾರು ಐದು ನೂರಕ್ಕೂ ಅಧಿಕ ಯುವ ಮತದಾರರ ಜೊತೆ ಸಂವಾಧ ಕಾರ್ಯಕ್ರಮವನ್ನು ನಡೆಸಲಾಯಿತು. ಯುವ ಮತದಾರರ ಕೇಳಿದ ಹಲವಾರು ಪ್ರಶ್ನೆಗಳಿಗೆ ಪ್ರಶಾಂತ ದೇಶಪಾಂಡೆ ಉತ್ತರಿಸಿದರು. ಸಮಾವೇಶದಲ್ಲಿ ಜಿಪಂಉಪಾಧ್ಯಕ್ಷ ಸಂತೋಷರೇಣಕೆ, ಪುರಸಭೆಅಧ್ಯಕ್ಷ ಶಂಕರ ಬೆಳಗಾಂವಕರ, ಬ್ಲಾಕ್‍ಅಧ್ಯಕ್ಷ ಸುಭಾಶ ಕೋರ್ವೆಕರ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಸತ್ಯಜೀತಗಿರಿ, ಉಮೇಶ ಬೋಳಶೆಟ್ಟಿ, ಯುವ ಮುಖಂಡರಾದ ಬಸೀರ್ ಗಿರಿಯಾಲ್, ರಾಜೇಶ ರುದ್ರಪಾಟಿ, ಮಾಲಾ ಬ್ರಿಗಾಂಜಾ, ರವಿ ತೋರಣಗಟ್ಟಿ, ರೋಹನ್ ಬ್ರಿಗಾಂಜಾ, ಅರುಣ ಬೂಬಾಟಿ, ಸುರೇಶ ತಳವಾರ, ಯಶವಂತ ಪಟ್ಟೇಕರ, ಅನಿಲ ಚವ್ಹಾಣ ಇತರರು ಇದ್ದರು.

watermarked 12 hly 2

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: ಉಮೇಶ ಬೋಳಶೆಟ್ಟಿ, ಕುರಿತು ಹೆಚ್ಚಿನ ಗಮನ ಹರಿಸಿ, ಕೆಪಿಸಿಸಿ ಸದಸ್ಯ ಪ್ರಶಾಂತ, ಜೋಯಿಡಾ ಮತ ಕ್ಷೇತ್ರ, ಧರ್ಮದ ಬಗ್ಗೆ ಆಸಕ್ತಿ, ಪ್ರಶಾಂತ ಆರ್ ದೇಶಪಾಂಡೆ, ಬೆಳವಣಿ, ಯುವ ಮುಖಂಡ, ರಾಜ್ಯದಲ್ಲಿ ನಡೆಯುವ ರಾಜಕೀಯ, ಶ್ರೀನಿವಾಸ ಘೋಟ್ನೆಕರ, ಸತ್ಯಜೀತಗಿರಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...