• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

20ಕ್ಕೂ ಅಧಿಕ ಜನರ ಕಿಸೆಗೆ ಜೆಬುಗಳ್ಳರು ಬ್ಲೇಡ್ ಹಾಕಿ ಕನ್ನ

March 15, 2018 by Yogaraj SK Leave a Comment

ಹಳಿಯಾಳ:

ದಿ.15 ರಂದು ಪಟ್ಟಣದ ಯಲ್ಲಾಪೂರ ನಾಕಾ ಬಳಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಕಾರ್ಯಕ್ರಮದಲ್ಲಿ  ಸುಮಾರು 20ಕ್ಕೂ ಅಧಿಕ ಜನರ ಕಿಸೆಗೆ ಜೆಬುಗಳ್ಳರು ಬ್ಲೇಡ್ ಹಾಕಿ ಕನ್ನ ಹಾಕಿರುವ ಘಟನೆ ನಡೆದಿದೆ.  ಕಾರ್ಯಕ್ರಮಕ್ಕೆ ಬಂದ ಕೆಲವರು ಹಣವನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ.  ಸುಮಾರು 8ಸಾವಿರಕ್ಕೂ ಅಧಿಕ ಜನ ಸೇರಿದ್ದ ಕಾರ್ಯಕ್ರಮದ ಬಳಿಯೇ ಊಟದ ವ್ಯವಸ್ಥೆಯನ್ನು ಮಾಡಿದ್ದರಿಂದ ತಡವಾಗಿ ಪ್ರಾರಂಭವಾದ ಕಾರ್ಯಕ್ರಮ ನಡೆಯುತ್ತಿದ್ದ ಕೆಲವೆ ಹೊತ್ತಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂದಂತಹ ಮಹಿಳೆಯರು ಊಟಕ್ಕೆ ಮುಗಿಬಿದ್ದಿದ್ದು ಕಂಡು ಬಂತು.  ಪುರುಷರು ಹಾಗೂ ಮಹಿಳೆಯರಿಗೆ ಒಂದೆ ಬಳಿ ಊಟದ ವ್ಯವಸ್ಥೆ ಇದ್ದಿದ್ದರಿಂದ ಇಲ್ಲಿ ಗೊಂದಲ ಉಂಟಾಗಿತ್ತು ಅಲ್ಲದೇ  ಈ ಸಂದರ್ಭದಲ್ಲೇ ಕಿಸೆಗಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿದ್ದಾರೆಯೇ ಎಂಬುದು ತಿಳಿದು ಬರಬೇಕಾಗಿದೆ. ಕಾರ್ಯಕ್ರಮಕ್ಕೆ ಬಂದು ಹಣ, ಮೊಬೈಲ ಕಳೆದುಕೊಂಡವರು ಕಾರ್ಯಕ್ರಮ ಸಂಘಟಕರ ಬಳಿ ಕಳೆದುಕೊಂಡ ಹಣ ನೀಡುವಂತೆ ಒತ್ತಾಯಿಸುತ್ತಿದ್ದಾಗ ಮಾತಿಚ ಚಕಮಕಿಯು ನಡೆದಿದೆ.    ಇನ್ನೂ ಕಾರ್ಯಕ್ರಮಕ್ಕೆ ಆಸೆ-ಆಮಿಷಗಳನ್ನು ಹೊತ್ತು ಬಂದಿದ್ದ ಮಹಿಳೆಯರಿಗೆ ಸರಿಯಾಗಿ ಊಟವು ಸಿಗದೆ ಅವರಿಗೆ ನೀಡಿದ್ದ ಭರವಸೆಯು ಈಡೇರದೆ ಇರುವುದಕ್ಕೆ ಜೆಡಿಎಸ್ ಪಕ್ಷದ ಕಾರ್ಯಕ್ರಮ ಸಂಘಟಕರಿಗೆ ಹಿಡಿಶಾಪ ಹಾಕುತ್ತಿರುವುದು ಸಾಮಾನ್ಯವಾಗಿತ್ತು.  ಬೈಕ್ ರ್ಯಾಲಿಗೆ ಆಗಮಿಸಿದ್ದ ಬೈಕ್‍ಗಳಿಗೆ ಫ್ರೀ ಪೆಟ್ರೋಲ್ ಕಾರ್ಡ, ಟೀ ಶರ್ಟ, ಹಣ ಮತ್ತು ಮಹಿಳೆಯರಿಗೆ ಸೀರೆ, ಉಚಿತ ವಾಹನ ವ್ಯವಸ್ಥೆ ಹಾಗೂ ಹಣ ನೀಡುವ ಆಮಿಷ ನೀಡಲಾಗಿರುವುದು ಕಾರ್ಯಕ್ರಮಕ್ಕೆ ಆಗಮಿಸಿದವರೇ ಮಾಧ್ಯಮದವರು ಕೇಳಿದ ಪ್ರಶ್ನೇಗಳಿಗೆ ಉತ್ತರಿಸಿದಾಗ ತಿಳಿದು ಬಂತು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Haliyal News Tagged With: 20ಕ್ಕೂ ಅಧಿಕ ಜನರ, ಆಸೆ-ಆಮಿಷ, ಊಟದ ವ್ಯವಸ್ಥೆ, ಕನ್ನ, ಕಿಸೆಗಳ್ಳರು, ಕಿಸೆಗೆ, ಜೆಬುಗಳ್ಳರು ಬ್ಲೇಡ್, ಟೀ ಶರ್ಟ, ಪುರುಷರು ಹಾಗೂ ಮಹಿಳೆ, ಪೆಟ್ರೋಲ್ ಕಾರ್ಡ, ಯಲ್ಲಾಪೂರ ನಾಕಾ, ವಿಕಾಸ ಪರ್ವ ಕಾರ್ಯಕ್ರಮ, ಹಣ, ಹಾಕಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,060 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar