ಹಳಿಯಾಳ :
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರ 71 ನೇ ಜನ್ಮದಿನದ ಅಂಗವಾಗಿ ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಮಿಟಿಯಿಂದ ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿ ನಾಯಕನ ಹುಟ್ಟುಹಬ್ಬ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಸÀ ಕೊರ್ವೆಕರ ನೇತೃತ್ವದಲ್ಲಿ ಪುರಸಭೆ ಸದಸ್ಯರಾದ ಪ್ರೇಮಾ ತೊರಣಗಟ್ಟಿ, ಸತ್ಯಜೀತ ಗಿರಿ, ಉಮೇಶ ಬೊಳಶೆಟ್ಟಿ, ಸುರೇಶ ತಳವಾರ, ಅನಿಲ ಫರ್ನಾಂಡಿಸ್, ಮಾಲಾ ಬ್ರಗಾಂಜಾ, ರೋಹನ ಮೊದಲಾದವರು ಆಸ್ಪತ್ರಗೆ ಆಗಮಿಸಿ ದಾಖಲಾದ ಒಳರೋಗಿಗಳಿಗೆ ಹಣ್ಣು, ಹಂಪಲ ಬಿಸ್ಕತ್‍ಗಳನ್ನು ವಿತರಿಸಿದರು. ಬಳಿಕ ಇಲ್ಲಿಯ ಸರ್ದಾರ್ ವಲ್ಲಭಾಯಿ ಉದ್ಯಾನವನದಲ್ಲಿರುವ ಚಿಣ್ಣರ ಅಂಗನವಾಡಿಗೆ ಆಗಮಿಸಿ ಅವರಿಗೆ ಸಿಹಿ ಪದಾರ್ಥ ಹಾಗೂ ಶಾಸಕರ ಮಾದರಿ ನಂ.1 ಶಾಲೆಯಲ್ಲಿ ಹಾಗೂ ಇಂದಿರಾ ಕ್ಯಾಂಟಿನ್‍ನಲ್ಲಿ ಸಿಹಿ ಹಂಚಿ ನಾಯಕನ ಜನ್ಮದಿನ ಆಚರಿಸಲಾಯಿತು.
Leave a Comment